ಒಎನ್ಜಿಸಿಯಲ್ಲಿನ ತನ್ನ ಶೇ.1.5% ಪಾಲು ಮಾರಾಟ ಮಾಡಿ 3000ಕೋಟಿ ರೂ. ಸಂಗ್ರಹಿಸಲು ಸಿದ್ಧವಾಗಿರುವ ಕೇಂದ್ರ ಸರಕಾರ

ಹೊಸದಿಲ್ಲಿ: ಕೇಂದ್ರ ಸರಕಾರವು ಆಯಿಲ್ ಎಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್‍ನಲ್ಲಿ (ಒಎನ್‍ಜಿಸಿ) ಇರುವ ತನ್ನ ಶೇ 1.5ರಷ್ಟು ಪಾಲನ್ನು ಆಫರ್ ಆಫ್ ಸೇಲ್ ಮೂಲಕ ಮಾರಾಟ ಮಾಡಲಿದ್ದು ಈ ಮೂಲಕ ತಲಾ ಷೇರಿಗೆ ರೂ 159ರಂತೆ ಕೇಂದ್ರ ಸರಕಾರ ರೂ 3,000 ಕೋಟಿ ರೂ. ಸಂಗ್ರಹಿಸುವ ಉದ್ದೇಶ ಹೊಂದಿದೆ ಎಂದು ವರದಿಯಾಗಿದೆ.
ಷೇರು ಬೆಲೆಯನ್ನು ಮಂಗಳವಾರದ ಬಿಎಸ್‍ಇ ಕ್ಲೋಸಿಂಗ್ ದರವಾದ ರೂ 171.05ಕ್ಕಿಂತ ಶೇ 7ರಷ್ಟು ಕಡಿಮೆ ಇರಿಸಲಾಗಿದೆ. ಮಂಗಳವಾರ ಷೇರು ಬೆಲೆ ಸೋಮವಾರದ ಕ್ಲೋಸಿಂಗ್ ದರಕ್ಕಿಂತ ಶೇ 3.03ರಷ್ಟು ಕಡಿಮೆಯಾಗಿತ್ತು.
ಕೇಂದ್ರ ಸರಕಾರ ಒಎನ್‍ಜಿಸಿಯಲ್ಲಿನ ತನ್ನ ಶೇ 1.5 ಪಾಲನ್ನು ಮಾರಾಟ ಮಾಡುವುದರಿಂದ ಆಫರ್ ಆಫ್ ಸೇಲ್ ಗುರುವಾರ ಆರಂಭಗೊಳ್ಳಲಿದ್ದು ರಿಟೇಲ್ ಹೂಡಿಕೆದಾರರು ಬಿಡ್ ಸಲ್ಲಿಸಬಹುದು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಟ್ವೀಟ್ ಮಾಡಿದ್ದಾರೆ.
Next Story