ಮಂಗಳೂರು: ಫಿಸಿಯೋಕಾನ್ 2022 ಅಂತರ್ ರಾಷ್ಟ್ರೀಯ ಸಮ್ಮೇಳನ

ಮಂಗಳೂರು: ಫಿಸಿಯೋಕಾನ್ 2022 ಅಂತರಾಷ್ಟ್ರೀಯ ಸಮ್ಮೇಳನವನ್ನು ಟಿಎಂ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಮಾರ್ಚ್ 22ರಿಂದ ಮಾರ್ಚ್ 27ರವರೆಗೆ ಆಯೋಜಿಸಲಾಯಿತು.
ಸಮ್ಮೇಳನದಲ್ಲಿ ಒಟ್ಟು 5000 ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಮ್ಮೇಳನವು ಮಾರ್ಚ್ 22 ರಂದು ರಕ್ತದಾನ ಶಿಬಿರದೊಂದಿಗೆ ಪ್ರಾರಂಭವಾಯಿತು. ಮಾರ್ಚ್ 23ರಂದು ಸರ್ಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಹಣ್ಣು ವಿತರಿಸಲಾಯಿತು. ಮಾರ್ಚ್ 24ರಂದು ಮಂಗಳೂರು ಮತ್ತು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಮ್ಮೇಳನದ ಪೂರ್ವಭಾವಿ ಕಾರ್ಯಾಗಾರವನ್ನು ನಡೆಸಲಾಯಿತು. ಮಾರ್ಚ್ 25 ಮತ್ತು 26 ರಂದು ಮುಖ್ಯ ಸಮ್ಮೇಳನಕ್ಕೆ 5000 ಪ್ರತಿನಿಧಿಗಳು ಸಾಕ್ಷಿಯಾದರು ಮತ್ತು ವಿವಿಧ ಅಂತರ್ ರಾಷ್ಟ್ರೀಯ ಮತ್ತು ರಾಷ್ಟ್ರೀಯ ಭಾಷಣಕಾರರು ಸಂವಾದ ನಡೆಸಿದರು.
ಮಾರ್ಚ್ 27ರಂದು ಕಾನ್ಫರೆನ್ಸ್ ನಂತರದ ಕಾರ್ಯಾಗಾರವನ್ನು ವಿವಿಧ ಸ್ಥಳಗಳಲ್ಲಿ ನಡೆಸಲಾಯಿತು, ಇದರಲ್ಲಿ ವಿಕಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ ಒಂದಾಗಿದೆ. ಒಂದು ದಿನದ ಕಾರ್ಯಾಗಾರದಲ್ಲಿ ಡಾ. ಸ್ನೇಹಲ್ ದೇಶಪಾಂಡೆಯವರ "ಟ್ಯಾಪಿಂಗ್ ಇನ್ ಪೀಡಿಯಾಟ್ರಿಕ್ಸ್" ವಿಷಯವಾಗಿತ್ತು. ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಕೆವಿಜಿ ಸುಳ್ಯ ವೈದ್ಯಕೀಯ ಕಾಲೇಜಿನ ನಿರ್ದೇಶಕಿ ಡಾ. ಐಶ್ವರ್ಯ ಕೆ.ಸಿ., ಗೌರವ ಅತಿಥಿಗಳಾಗಿ ಹುಬ್ಬಳ್ಳಿಯ ಮಕ್ಕಳ ಅಭಿವೃದ್ಧಿ ಕೇಂದ್ರ ಮತ್ತು ಫಿಸಿಯೋಥೆರಪಿ ಕ್ಲಿನಿಕ್‍ನ ಪಾಲುದಾರರಾದ ಭೌತ ಚಿಕಿತ್ಸಕ, ಹಿರಿಯ ಸಲಹೆಗಾರರಾದ ಡಾ. ಮಧುಲಿಕಾ ವಸಂತ ಹೊರಟ್ಟಿ ಆಗಮಿಸಿದ್ದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಿಕಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲರಾದ ಅಜಯ್ ಠಾಕೂರ್ ವಹಿಸಿದ್ದರು. ವಿಕಾಸ್ ಸಮೂಹ ಸಂಸ್ಥೆಗಳ ಪಾರ್ಥ ಸಾರಥಿ ಪಾಲೆಮಾರ್, ವಿಕಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
