ದನಗಳನ್ನು ಕಸಾಯಿಖಾನೆಗೆ ಮಾರಾಟ ಆರೋಪ: ದೇವಸ್ಥಾನ ಸಮಿತಿಯ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಹೈದರಾಬಾದ್: ದನಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಿದ ಆರೋಪದ ಮೇಲೆ ತೆಲಂಗಾಣದ ರಾಜಧಾನಿ ಹೈದರಾಬಾದ್ ಸಮೀಪದ ದಬೀರಪುರ ಪ್ರದೇಶದಲ್ಲಿರುವ ಶ್ರೀ ಅಮ್ಮಾವರಿ ದೇವಾಲಯಂ (ಪೊಚ್ಚಮ್ಮ ಗುಡಿ) ಇದರ ಇಬ್ಬರು ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು indiatimes.com ವರದಿ ಮಾಡಿದೆ.
ದೇವಳ ಸಮಿತಿ ಅಧ್ಯಕ್ಷ ಡಿ ಪ್ರೇಮ್ ಕುಮಾರ್ ಮತ್ತು ಸಮಿತಿ ಸದಸ್ಯ ಎಡ್ಲ ಮಹೇಂದರ್ ಎಂಬವರಿಬ್ಬರು ಪ್ರಕರಣ ಎದುರಿಸುತ್ತಿದ್ದಾರೆ. ಇಬ್ಬರೂ ಸ್ಥಳೀಯ ಕಸಾಯಿಖಾನೆಗೆ ದನಗಳನ್ನು ಮಾರಾಟ ಮಾಡಿದ್ದಾರೆಂದು ಆರೋಪಿಸಿ ಅಖಿಲ ಭಾರತ ಗೋ ಸೇವಾ ಫೌಂಡೇಶನ್ ಪ್ರಕರಣ ದಾಖಲಿಸಿತ್ತು.
ತೆಲಂಗಾಣ ಗೋ ಹತ್ಯೆ ತಡೆ ಮತ್ತು ಪ್ರಾಣಿ ಸಂರಕ್ಷಣಾ ಕಾಯಿದೆ 1977 ಇದರನ್ವಯ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.
Next Story