Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚುನಾವಣಾ ವ್ಯವಸ್ಥೆ ಸುಧಾರಣೆಗೆ ಸ್ವಯಂ...

ಚುನಾವಣಾ ವ್ಯವಸ್ಥೆ ಸುಧಾರಣೆಗೆ ಸ್ವಯಂ ಶುದ್ಧೀಕರಣಕ್ಕೊಳಗಾಗಲೇ ಬೇಕು: ಸಿದ್ದರಾಮಯ್ಯ

''1983ರಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾಗ... ''

ವಾರ್ತಾಭಾರತಿವಾರ್ತಾಭಾರತಿ30 March 2022 8:07 PM IST
share
ಚುನಾವಣಾ ವ್ಯವಸ್ಥೆ ಸುಧಾರಣೆಗೆ ಸ್ವಯಂ ಶುದ್ಧೀಕರಣಕ್ಕೊಳಗಾಗಲೇ ಬೇಕು: ಸಿದ್ದರಾಮಯ್ಯ

ಬೆಂಗಳೂರು, ಮಾ. 30: ‘ಎಲ್ಲ್ಲ ರಾಜಕೀಯ ಪಕ್ಷಗಳು ಮತ್ತು ನಾಯಕರು ಆತ್ಮಾವಲೋಕನ ಮಾಡಿಕೊಂಡು, ಚುನಾವಣಾ ವ್ಯವಸ್ಥೆ ಸುಧಾರಣೆಗೆ ಸ್ವಯಂ ಶುದ್ಧೀಕರಣ ಮಾಡದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿವು ಕಷ್ಟ. ಪ್ರಾಮಾಣಿಕ ಕಾಳಜಿ ಇರುವ, ಆರ್ಥಿಕವಾಗಿ ದುರ್ಬಲರಾದ ನಿಷ್ಠಾವಂತ ಜನರು ರಾಜಕೀಯದಿಂದ ದೂರ ಹೋಗದಂತೆ ತಡೆಯಬೇಕೆಂಬ ಕಾರಣಕ್ಕೆ ರಾಜಕೀಯ ವ್ಯವಸ್ಥೆಯ ಬದಲಾವಣೆ ಮಾಡಲೇಬೇಕಾಗಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ‘ಚುನಾವಣಾ ವ್ಯವಸ್ಥೆ ಸುಧಾರಣೆಗಳ ಅಗತ್ಯತೆ' ಕುರಿತು ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ‘ಒಂದು ದೇಶ, ಒಂದು ಚುನಾವಣೆ ಎಂಬುದು ಭಾರತದಂತ ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಪ್ರಾಯೋಗಿಕವಾಗಿ ಅಸಾಧ್ಯವಾದ ಮಾತು. ಇದಕ್ಕೆ ನೂರಾರು ಕಾರಣಗಳನ್ನು ಕೊಡಬಹುದು. ಸ್ವಾತಂತ್ರ್ಯ ಬಂದಾಗ ದೇಶದ ಸಾಕ್ಷರತೆ ಪ್ರಮಾಣ ಶೇ.16, ಈಗ ದೇಶದ ಸಾಕ್ಷರತೆ ಪ್ರಮಾಣ ಶೇ.82ರಷ್ಟು. ಶೈಕ್ಷಣಿಕ ಕ್ಷೇತ್ರದಲ್ಲಿ ಇಷ್ಟು ಬದಲಾವಣೆ ಆದರೂ ಇಂದಿನ ಚುನಾವಣೆಯನ್ನು ಜಾತಿ, ಹಣ ಬಲ, ತೋಳ್ಬಲ ಮತ್ತು ಮಾಫಿಯಾಗಳು ನಿಯಂತ್ರಿಸುತ್ತಿವೆ' ಎಂದು ಬೇಸರ ವ್ಯಕ್ತಪಡಿಸಿದರು.

‘ಚುನಾವಣಾ ವ್ಯವಸ್ಥೆ ಬದಲಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಸುಧಾರಣೆಯಾಗದೆ ಹೋದರೆ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ. ಪ್ರಜಾಪ್ರಭುತ್ವ ದುರ್ಬಲವಾದರೆ ಸಮಾಜ, ದೇಶ ದುರ್ಬಲವಾಗುತ್ತದೆ. ಎಪ್ಪತ್ತರ ದಶಕದಿಂದ ಈಚೆಗೆ ಚುನಾವಣಾ ವ್ಯವಸ್ಥೆ ಕೆಡಲು ಆರಂಭವಾಯಿತು ಎಂದು ಸ್ಪೀಕರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದ್ದಾರೆ. ಚುನಾವಣಾ ವ್ಯವಸ್ಥೆ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಬಲಿಷ್ಠವಾಗುತ್ತಾ ಹೋಗಬೇಕಿತ್ತು, ಆದರೆ ನಮ್ಮಲ್ಲಿ ದುರ್ಬಲವಾಗುತ್ತಾ ಹೋಗುತ್ತಿದೆ ಎಂಬ ಒಟ್ಟು ಅಭಿಪ್ರಾಯ ಸದನದಲ್ಲಿ ವ್ಯಕ್ತವಾಗಿದೆ. ಇದು ಅತ್ಯಂತ ಕಳವಳದ ಸಂಗತಿಯಾಗಿದೆ' ಎಂದು ಸಿದ್ದರಾಮಯ್ಯ ತಿಳಿಸಿದರು.

‘1971ರಿಂದ ನಾನು ರಾಜಕೀಯದಲ್ಲಿ ಭಾಗವಹಿಸಲು ಆರಂಭಿಸಿದ್ದು. ಆ ಸಂದರ್ಭದಲ್ಲಿ ನಾನು ಕಾನೂನು ಕಾಲೇಜಿನಲ್ಲಿ ಓದುತ್ತಿದ್ದೆ ಮತ್ತು ವಿದ್ಯಾರ್ಥಿ ಸಂಘಟನೆಯ ಮುಖಂಡನಾಗಿದ್ದೆ. ಆಗಿನ ಸಂಸತ್ ಚುನಾವಣೆಯಲ್ಲಿ ಹುಣಸೂರಿನ ಡಾ.ಎಚ್.ಎಲ್.ತಿಮ್ಮೇಗೌಡರ ಸಂಸ್ಥಾ ಕಾಂಗ್ರೆಸ್‍ನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ನಾನು ಆ ವೇಳೆಗೆ ಸಮಾಜವಾದಿ ಪಕ್ಷದ ಸದಸ್ಯನೂ ಆಗಿದ್ದೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಇಲ್ಲದಿರುವುದರಿಂದ ಸಂಸ್ಥಾ ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಪ್ರೊ.ನಂಜುಂಡಸ್ವಾಮಿ ಅವರು ನಮಗೆ ಹೇಳಿದ್ದರು. ಹಾಗಾಗಿ ನಾನು ನಮ್ಮೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರಕ್ಕೆ ಹೋಗಿದ್ದೆ' ಎಂದು ಅವರು ಸ್ಮರಿಸಿದರು.

‘ಎಪ್ಪತ್ತರ ದಶಕದಲ್ಲಿ ಹಳ್ಳಿಗಳಲ್ಲಿ ಒಬ್ಬರು, ಇಬ್ಬರು ಮುಖಂಡರು ಇರುತ್ತಿದ್ದರು. ನಾವು ಅವರ ಬಳಿ ಹೋಗಿ ಹಳ್ಳಿಯ ಜನರ ಮತ ನಮಗೆ ಹಾಕಿಸಿ ಎಂದು ಕೇಳುತ್ತಿದ್ದೆವು. ಆ ಮುಖಂಡ ನಮಗೆ ಒಂದು ಸಲ ಮಾತು ಕೊಟ್ಟರೆ ಅಥವಾ ವೀಳ್ಯದೆಲೆ ನೀಡಿದರೆ ಆಮೇಲೆ ಯಾರೇ ಬಂದು ಆಸೆ ಆಮಿಷವೊಡ್ಡಿದರೂ ಅವರು ಬದಲಾಗುತ್ತಿರಲಿಲ್ಲ. 1972ರ ಚುನಾವಣೆಯಲ್ಲಿ ರಾಜಶೇಖರ ಮೂರ್ತಿಯವರು ಸ್ಪರ್ಧೆ ಮಾಡಿದ್ದರು. ಆಗಲೂ ಪ್ರಚಾರ ಮಾಡಿದ್ದೆ. ಅಂದಿನ ಚುನಾವಣಾ ವ್ಯವಸ್ಥೆಗೂ ಇಂದಿನ ಚುನಾವಣಾ ವ್ಯವಸ್ಥೆಗೂ ಬಹಳಷ್ಟು ಬದಲಾಗಣೆ ಆಗಿದೆ. 1978ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೆ. ನಾನು ಮತ್ತು ನನ್ನ ಸ್ನೇಹಿತ ವೈ.ಮಹೇಶ್ ಇಬ್ಬರು ಕರಪತ್ರವನ್ನು ಸಿದ್ಧಪಡಿಸಿಕೊಂಡು, ಒಂದೇ ಒಂದು ಸ್ಕೂಟರ್‍ನಲ್ಲಿ ಊರೂರಿಗೆ ಹಂಚಿ ಬಂದಿದ್ದೆವು. ಆಗಿನ ಒಟ್ಟು ಖರ್ಚು 3,500 ರೂ. ಎಂದು ಸಿದ್ದರಾಮಯ್ಯ ವಿವರಿಸಿದರು.

‘1983ರಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾಗ ಜಾರ್ಜ್ ಫೆರ್ನಾಂಡೀಸ್ ಅವರು 10ಸಾವಿರ ರೂ.ನನಗೆ ಕೊಟ್ಟಿದ್ದರು, ನಮ್ಮೂರ ಜನ 10ಸಾವಿರ ರೂ.ಸಂಗ್ರಹಿಸಿ ಕೊಟ್ಟಿದ್ದರು. ಹಳ್ಳಿಗಳಿಗೆ ಪ್ರಚಾರಕ್ಕೆ ಹೋದಾಗ ಜನ ದುಡ್ಡು ಕೊಡೋರು. ಆ ಚುನಾವಣೆಯಲ್ಲಿ ಒಟ್ಟು ಖರ್ಚಾದ ಹಣ 63 ಸಾವಿರ ರೂ.ಗಳು. ಇದೀಗ ಚುನಾವಣಾ ಆಯೋಗ 40 ಲಕ್ಷ ರೂ.ವಿಧಾನಸಭೆ ಚುನಾವಣೆಗೆ, 95ಲಕ್ಷ ರೂ. ಲೋಕಸಭಾ ಚುನಾವಣೆಗೆ ಖರ್ಚು ಮಾಡಬೇಕು ಎಂದು ನಿಗದಿ ಮಾಡಿದೆ. ಆದರೆ ಚುನಾವಣಾ ಆಯೋಗಕ್ಕೆ ನೀಡುವುದು ‘ರಾಮನ ಲೆಕ್ಕ', ಇದನ್ನು ಬಿಟ್ಟು ಇನ್ನೊಂದು ‘ಕೃಷ್ಣನ ಲೆಕ್ಕ'ವೂ ಇರುತ್ತದೆ' ಎಂದು ಸಿದ್ದರಾಮಯ್ಯ ವಿಶ್ಲೇಷಣೆ ಮಾಡಿದರು.

‘ಅಮೆರಿಕಾದ ನ್ಯಾಯಮೂರ್ತಿ ಲೂಯಿಸ್ ಬ್ರಾಂಡೆಸ್ ಅವರು ‘ನಾವೆಲ್ಲ ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ, ಈ ದೇಶದಲ್ಲಿ ಅಪಾರ ಸಂಪತ್ತು ಗಳಿಸಿರುವ ಜನರಿದ್ದಾರೆ, ಸಾಮಾನ್ಯ ಜನರೂ ಇದ್ದೇವೆ. ಆದರೆ ಇಲ್ಲಿ ಸಿರಿವಂತರು ಮತ್ತು ಪ್ರಭುತ್ವ ಒಟ್ಟಿಗೆ ಸೇರಬಾರದು' ಎಂದು ಹೇಳಿದ್ದಾರೆ. ಇದೇ ರೀತಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಅಧಿಕಾರ ಉಳ್ಳವರ ಕೈಯಲ್ಲಿ ಮಾತ್ರವೇ ಇರಬಾರದು ಎಂದು ಹೇಳಿದ್ದರು. ಇಂದು ರಾಜಕೀಯ ಪಕ್ಷಗಳು ಮತ್ತು ಕಾರ್ಪೊರೇಟ್ ಬಾಡಿಗಳ ಮೈತ್ರಿ ಆರಂಭವಾಗಿದೆ. ಇದರಿಂದ ಕಾರ್ಪೊರೇಟ್ ಬಾಡಿಗಳು ಸರಕಾರವನ್ನು ನಿಯಂತ್ರಿಸುವಷ್ಟು ಪ್ರಬಲವಾಗಿವೆ. 2013ರಲ್ಲಿ ದೇಶದ ಕೆಲವೇ ಕೆಲವು 142 ಕಾರ್ಪೊರೇಟ್ ಸಂಸ್ಥೆಗಳ ಆಸ್ತಿ 23ಲಕ್ಷ ಕೋಟಿ ರೂ.ಇತ್ತು, ಈಗದು 54 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕಾರ್ಪೊರೇಟ್ ಕಂಪೆನಿಗಳೊಂದಿಗೆ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಬಾರದು ಎಂದು ಹೇಳಿದ್ದು' ಎಂದು ಸಿದ್ದರಾಮಯ್ಯ ತಿಳಿಸಿದರು.

‘ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷದ ಚಿಹ್ನೆಯ ಮೇಲೆ ನಡೆಯಲ್ಲ ಅಂದಮೇಲೆ ಚುನಾವಣಾ ನೀತಿಸಂಹಿತೆ ಜಾರಿ ಮಾಡುವ ಅಗತ್ಯ ಏನಿದೆ? ಚುನಾವಣೆಯಲ್ಲಿ ವಿಳಂಬವಾದಷ್ಟೂ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂಬುದು ನನ್ನ ಅನಿಸಿಕೆ. ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯೋಗದ ಅಧ್ಯಕ್ಷರ ನೇಮಕವನ್ನು ಸರಕಾರದ ಶಿಫಾರಸಿನ ಮೇಲೆ ರಾಜ್ಯಪಾಲರು, ರಾಷ್ಟ್ರಪತಿ ಮಾಡುವ ಬದಲು ಪ್ರಧಾನಿ, ವಿರೋಧ ಪಕ್ಷದ ನಾಯಕರು, ಮೇಲ್ಮನೆಯ ವಿರೋಧ ಪಕ್ಷದ ನಾಯಕ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಒಳಗೊಂಡ ಒಂದು ಮಂಡಳಿ ರಚನೆಯಾಗಬೇಕು. ಅವರ ಮೂಲಕ ಅಧ್ಯಕ್ಷರು ಮತ್ತು ಆಯುಕ್ತರ ನೇಮಕವಾಗಬೇಕು. ಸುಧಾರಣೆಗಳು ಹೀಗೆ ಆರಂಭವಾದಾಗ ಮಾತ್ರ ಬದಲಾವಣೆ ಸಾಧ್ಯ' ಎಂದು ಅವರು ತಿಳಿಸಿದರು.

ಪಕ್ಷಾಂತರ ರೋಗ ತಡೆಗಟ್ಟಿ: ‘1990ರಲ್ಲಿ ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿದ್ದಾಗ ದಿನೇಶ್ ಗೋಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿತ್ತು, ಅದರಲ್ಲಿ ಅಡ್ವಾಣಿ ಅವರು ಇದ್ದರು. ಆ ಸಮಿತಿಯ 107 ಶಿಫಾರಸುಗಳಲ್ಲಿ ಹಲವು ಜಾರಿಯಾಗಲೇ ಇಲ್ಲ. 1993ರಲ್ಲಿ ವೋರಾ ಕಮಿಟಿ ರಚನೆಯಾಯಿತು. ಅದೂ ಶಿಫಾರಸು ಮಾಡಿತ್ತು. 1885ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಪಕ್ಷಾಂತರ ನಿμÉೀಧ ಕಾನೂನು ಜಾರಿಗೆ ತಂದರು. ಆದರೆ, ಈಗಲೂ ಪಕ್ಷಾಂತರ ನಡೆಯುತ್ತಿದೆ. ಒಂದು ಪಕ್ಷದಿಂದ ಗೆದ್ದ ನಂತರ ಮಧ್ಯದಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ವ್ಯಕ್ತಿ ಮುಂದಿನ ಹತ್ತು ವರ್ಷಗಳ ವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತ ನಿಯಮ ರೂಪಿಸಿ, ಜಾರಿ ಮಾಡಬೇಕು. ಆಗ ಪ್ರಜಾಪ್ರಭುತ್ವಕ್ಕಂಟಿದ ಪಕ್ಷಾಂತರ ಎಂಬ ರೋಗ ಗುಣವಾಗುತ್ತದೆ. ಈ ಕೆಲಸವನ್ನು ಕೇಂದ್ರ ಸರಕಾರ ಏಕೆ ಮಾಡಬಾರದು?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಇಂದಿನ ಚುನಾವಣಾ ವ್ಯವಸ್ಥೆ ಹಾಳಾಗಲು ನಮ್ಮ ಪಾಲು ಎಷ್ಟಿದೆಯೂ ಅಷ್ಟೇ ಪ್ರಜಾಪ್ರಭುತ್ವದ ಉಳಿದ ಅಂಗಗಳ ಪಾಲೂ ಇದೆ. ಸಮಾಜದ ಎಲ್ಲ ಶಿಕ್ಷಿತ, ವಿಚಾರವಂತ, ಪ್ರಗತಿಪರ, ಸಾಮಾಜಿಕ ಕಾಳಜಿ ಇರುವ ಜನರ ಜೊತೆಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸುಧಾರಣೆ ಸಾಧ್ಯ'

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ಭರವಸೆ ಕಡಿಮೆಯಾಗುತ್ತಿದೆ:  ‘ದೇಶದಲ್ಲಿ ಸುಮಾರು 19 ಲಕ್ಷ ಇವಿಎಂಗಳು ನಾಪತ್ತೆಯಾಗಿವೆ ಎಂಬ ವರದಿಯನ್ನು ಎಚ್.ಕೆ ಪಾಟೀಲರು ಓದಿ ಹೇಳಿದರು. ಇದಕ್ಕೆ ಹೊಣೆ ಯಾರು? ಇದೇ ಕಾರಣಕ್ಕೆ ಜನರಿಗೆ ಇವಿಎಂಗಳ ಮೇಲೆ ಭರವಸೆ ಕಡಿಮೆಯಾಗುತ್ತಿದೆ. ನನ್ನ ಬಳಿ ಒಬ್ಬ ತಂತ್ರಜ್ಞ ಬಂದು ಇವಿಎಂಗಳನ್ನು ಹೇಗೆ ದುರ್ಬಳಕೆ ಮಾಡಲು ಸಾಧ್ಯ ಎಂದು ಕಣ್ಣೆದುರೇ ಡೆಮೋ ತೋರಿಸಿದ. ತಂತ್ರಜ್ಞಾನದಲ್ಲಿ ನನಗೆ ಹೆಚ್ಚು ಮಾಹಿತಿ ಇಲ್ಲದಿರುವುದರಿಂದ ಸರಿ ಬಿಡಪ್ಪಾ ಎಂದು ಹೇಳಿ ಕಳುಹಿಸಿದೆ. ಆದರೆ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲು ಒಂದು ಅವಕಾಶ ಇದ್ದೇ ಇರುತ್ತದೆ ಎಂಬುದು ಸತ್ಯ. ಅದಕ್ಕೆ ಜರ್ಮನಿಯಂತಾ ಮುಂದುವರಿದ ರಾಷ್ಟ್ರವೂ ಇವಿಎಂ ಬಿಟ್ಟು ಬ್ಯಾಲೆಟ್ ಪೇಪರ್‍ಗೆ ಮರಳಿದೆ' ಎಂದು ಸಿದ್ದರಾಮಯ್ಯ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X