ಸಲಾಂ ಮಂಗಳಾರತಿ; ಕೊಲ್ಲೂರು ದೇವಸ್ಥಾನ ಸ್ಪಷ್ಟನೆ

ಉಡುಪಿ : ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿ ದಿನ ಪ್ರದೋಷ ಪೂಜಾ ಸಮಯದಲ್ಲಿ ನಡೆಯುವ ಮಂಗಳಾರತಿಯನ್ನು ಸ್ಥಳೀಯರು ʼಸಲಾಂ ಮಂಗಳಾರತಿʼ ಎನ್ನುವುದು ವಾಡಿಕೆಯಲ್ಲಿದೆ. ಆದರೆ ಈ ಬಗ್ಗೆ ಯಾವುದೇ ಪೂರಕ ದಾಖಲೆಗಳು ಇಲ್ಲ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸ್ಪಷ್ಟಪಡಿಸಿದೆ.
ಇದು ಪ್ರದೋಷ ಪೂಜೆ ಮಂಗಳಾರತಿಯೇ ಹೊರತು ಬೇರೆ ಯಾವುದೇ ಹೆಸರಿನದ್ದಲ್ಲ ಹಾಗೂ ಯಾವುದೇ ಒಬ್ಬ ವ್ಯಕ್ತಿಗೆ ಸಂಬಂಧಪಟ್ಟಿದ್ದಾಗಿರುವುದಿಲ್ಲ. ಸಲಾಂ ಹೆಸರಿನಲ್ಲಿ ಯಾವುದೇ ಮಂಗಳಾರತಿ ಕ್ಷೇತ್ರದಲ್ಲಿ ನಡೆಯುತ್ತಿಲ್ಲ ಎಂದು ಸಮಿತಿ ಅಧ್ಯಕ್ಷ ಕೇರಾಡಿ ಚಂದ್ರಶೇಖರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





