ಯುವಕ ನಾಪತ್ತೆ

ಕಾಪು : ಮಲ್ಲಾರು ಗ್ರಾಮದ ಕೊಂಬಗುಡ್ಡೆಯ ಶೇಖ್ ಅಕ್ಬರ್ ಸಾಹೇಬ್ ಎಂಬವರ ಮಗ ಪವಾಝ್ ಅಹಮ್ಮದ್(37) ಎಂಬವರು ನಾಪತ್ತೆ ಯಾಗಿದ್ದಾರೆ.
ಮಾನಸಿಕ ಆಘಾತಕ್ಕೆ ಒಳಗಾಗಿರುವ ಇವರು ಅವಿವಾಹಿತರಾಗಿದ್ದಾರೆ. ಮಾ.22ರಂದು ಮಣಿಪಾಲದ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋದವರು, ಉದ್ಯೋಗ ಹುಡುಕಿಕೊಂಡು ದೂರ ಹೋಗುವುದಾಗಿ ತಾಯಿಗೆ ತಿಳಿಸಿದ್ದಾರೆ. ಬಳಿಕ ಗೋವಾ ಹೋಗಿ ಅಲ್ಲಿಂದ ಮುಂಬೈಗೆ ಹೋಗುವುದಾಗಿ ಹೇಳಿದ್ದು, ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story