ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾದ ಬಿಜೆಪಿ ಅವರನ್ನು ಕೆಟ್ಟ ಕೆಲಸಗಳಿಗೆ ಬಳಸುತ್ತಿದೆ: ಮುಹಮ್ಮದ್ ಹಾರಿಸ್ ನಲಪಾಡ್
ಪುತ್ತೂರಿನಲ್ಲಿ ಬ್ಲಾಕ್ ಯುವ ಕಾಂಗ್ರೆಸ್ ಪದಗ್ರಹಣ ಸಮಾರಂಭ

ಪುತ್ತೂರು: ದೇಶದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜನರಲ್ಲಿ ಹತಾಶಾ ಮನೋಭಾವ ತುಂಬಿದೆ. ದೇಶಕ್ಕೆ ಅಚ್ಚೇದಿನ್ ಕೊಡುತ್ತೇನೆ, ಯುವಕರಿಗೆ ಉದ್ಯೋಗ ಕೊಡುತ್ತೇನೆ, ಬಡವರ ಖಾತೆಗೆ ಹಣ ಜಮಾವಣೆ ಮಾಡುತ್ತೇನೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೇರಿದ ಮೋದಿ ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಯುವಕರಿಗೆ ಕೊಟ್ಟ ಮಾತಿನಂತೆ ಉದ್ಯೋಗ ಕೊಡುವುದನ್ನು ಬಿಟ್ಟು ಅವರನ್ನು ಕೆಟ್ಟ ಕೆಲಸಗಳಿಗೆ ಬಳಕೆ ಮಾಡುತ್ತಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಹಾರಿಸ್ ನಲಪಾಡ್ ಹೇಳಿದರು.
ಅವರು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ `ಯುವದ್ವನಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಜನರನ್ನು ತುಳಿಯುವ ಕೆಲಸವನ್ನು ಬಿಜೆಪಿ , ಆರೆಸ್ಸೆಸ್ ಮಾಡುತ್ತಿದೆ. ಜಾತಿನೋಡಿ, ಧರ್ಮ ನೋಡಿ ಜನರನ್ನು ಅಳೆಯುವ ಕೆಲಸದಲ್ಲಿ ನಿರತರಾಗಿದ್ದು ಈ ಕಾರಣಕ್ಕೆ ಇಂದು ರಾಜ್ಯದಲ್ಲಿ, ದೇಶದಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿಯಾಗಿದ್ದು ಮಾತ್ರವಲ್ಲದೆ ಸೌಹಾರ್ದಯುತವಾಗಿ ಬದುಕುತ್ತಿದ್ದ ವಿವಿಧ ಧರ್ಮಗಳ ಜನರನ್ನು ಒಡೆದು ಕೆಲಸವನ್ನು ಬಿಜೆಪಿ ಮಾಡುತ್ತಿದೆ.ಜನರನ್ನು ಧರ್ಮದ ಆಧಾರದಲ್ಲಿ ಕಾಣಬೇಡಿ. ಈ ದೇಶದಲ್ಲಿ ವಾಸಿಸುವ ಪ್ರತೀಯೊಬ್ಬರೂ ಭಾರತೀಯರೇ ಆಗಿದ್ದಾರೆ, ಕರ್ನಾಟಕದ ಜನ ಕನ್ನಡಿಗರಾಗಿದ್ದಾರೆ. ಜಾತಿ, ಧರ್ಮಗಳ ಗೋಡೆಯನ್ನು ಸೃಷ್ಟಿಸಬೇಡಿ ಎಂದು ಹೇಳಿದರು.
ರಾಜ್ಯದ ಎಲ್ಲಾ ಬೂತ್‍ಗಳಿಗೆ ಯುವ ಕಾಂಗ್ರೆಸ್ ಪದಾಧಿಕಾರಿಯನ್ನೇ ಸೋಶಿಯಲ್ ಮೀಡಿಯ ಪ್ರಚಾರಕರನ್ನಾಗಿ ನೇಮಕ ಮಾಡಲಾಗುತ್ತದೆ. ಪುತ್ತೂರಿನ ಎಲ್ಲಾ ಬೂತ್‍ಗಳಲ್ಲಿಯೂ 20 ದಿನಗಳಲ್ಲಿ ಡಿಜಿಟಲ್ ಸೇವೆ ಆರಂಭಗೊಳ್ಳಲಿದೆ. ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಸುಳ್ಳು ಮಾಹಿತಿಯನ್ನು ನೀಡಿ ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದು, ಬಿಜೆಪಿ ಸುಳ್ಳು ಮಾಹಿತಿಯ ಸತ್ಯಾಸತ್ಯತೆಯನ್ನು ಯುವ ಕಾಂಗ್ರೆಸ್ ಬಹಿರಂಗಪಡಿಸಲಿದೆ ಎಂದು ಹೇಳಿದರು. ರಾಜ್ಯದಲ್ಲೇ ಪುತ್ತೂರು ಯುವ ಕಾಂಗ್ರೆಸ್ ಘಟಕ ಉತ್ತಮ ರೀತಿಯಲ್ಲಿ ಕಾರ್ಯ ಎಸಗುತ್ತಿದ್ದು ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ ಅವರನ್ನು ನಲಪಾಡ್ ಅಭಿನಂದಿಸಿದರು.
ಕಾಂಗ್ರೆಸ್‍ನ ಎಲ್ಲಾ ಘಟಕಗಳು ಸಂಘಟಿತರಾಗಿ ಕೋಮುವಾದ ಮತ್ತು ಬಿಜೆಪಿ ಸರಕಾರದ ವಿರುದ್ಧ ಹೋರಾಟ ನಡೆಸಬೇಕಿದೆ. ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತರಾದರೆ ನಮ್ಮನ್ನು ಅಲುಗಾಡಿಸಲು ಯಾರಿಗೂ ಸಾದ್ಯವಾಗುವಿದಿಲ್ಲ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಯುವ ಕಾಂಗ್ರೆಸ್ ಘಟಕಕ್ಕೆ ಹೆಚ್ಚಿನ ಆದ್ಯತೆಯನ್ನು ಕೆಪಿಸಿಸಿ ನೀಡುತ್ತಿರುವುದ ಶ್ಲಾಘನೀಯವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಕಾಂಗ್ರೆಸ್ ಬಲಿಷ್ಟವಾಗುತ್ತಿದೆ. ಸುಳ್ಳು ಪ್ರಚಾರಕ್ಕೆ ಕಡಿವಾಣ ಹಾಕುವಲ್ಲಿ ಯುವ ಪಡೆ ಯಸಶ್ಸನ್ನು ಕಾಣುತ್ತಿದೆ. ಸೌಹಾರ್ದತೆಯ ವಾತಾವರಣ ಸೃಷ್ಟಿಗಾಗಿ ಕಾಂಗ್ರೆಸ್ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮತ್ತು ಬಿಜೆಪಿ ಸರಕಾರದ ಕೋಮುವಾದದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಯುವ ಕಾಂಗ್ರೆಸ್ ಮಾಡಲಿ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕಾಗಿ ಹಿಂದಿನಿಂದಲೂ ಕೋಮುಗಳ ನಡುವೆ ವಿಷ ಬೀಜವನ್ನು ಬಿತ್ತುವ ಕೆಲಸವನ್ನು ಮಾಡುತ್ತಲೇ ಬರುತ್ತಿದೆ. ಏನೂ ವಿಷಯ ಇಲ್ಲದೇ ಇದ್ದಾಗ ವಿಷಯ ಸೃಷ್ಟಿಸಿ ಸಮಾಜದಲ್ಲಿ ಕೋಮುಪ್ರಚೋಧನೆ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ ರಮನಾಥ ರೈ ಹೇಳಿದರು.
ಕಾಂಗ್ರೆಸ್ ಯಾವತ್ತೂ ಜನರನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಿಲ್ಲ. ಅಧಿಕಾರ ಮಾಡಿದಷ್ಟು ದಿನ ಕಾಂಗ್ರೆಸ್ ದೇಶಕ್ಕೆ, ಜನತೆಗೆ ಒಳ್ಳೆಯದನ್ನೇ ಮಾಡಿದೆ. ಸಮಸ್ಯೆಯನ್ನು ಸೃಷ್ಟಿಸುವುದೇ ಬಿಜೆಪಿ ಕಾಯಕವಾದರೆ ಅದನ್ನು ಬಗೆಹರಿಸುವುದು ಕಾಂಗ್ರೆಸ್ ಮಾಡುತ್ತಿರುವ ಕೆಲಸವಾಗಿದೆ. ಇಂದು ಜನರು ಕಾಂಗ್ರೆಸ್ ಮಾಡಿದ ಉತ್ತಮ ಕೆಲಸವನ್ನು ಮರೆಯುತ್ತಿದ್ದಾರೆ. ಶಾಲಾ ಮಧ್ಯಾಹ್ನದ ಬಿಸಿಯೂಟ, ರೈತರಿಗೆ ಉಚಿತ ವಿದ್ಯುತ್ , ಬಡವರಿಗೆ ಮನೆ ನಿರ್ಮಾಣ ಸೇರಿದಂತೆ ಕಾಂಗ್ರೆಸ್ ಜನತೆಯ ಹಿತಕ್ಕೋಸ್ಕರ ಸಾವಿರಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಜೆಪಿ ಅಭಿವೃದ್ದಿ ಕೆಲಸ ಮಾಡದೆ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸವನ್ನು ಮಾಡುತ್ತಿದೆ ಈ ಬಗ್ಗೆ ಜನ ಜಾಗೃತರಾಗಿರಬೇಕು ಎಂದು ಹೇಳಿದರು. ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮಾತನಾಡಿ ನೂತನ ಯುವ ಕಾಂಗ್ರೆಸ್ ಘಟಕಕ್ಕೆ ಶುಭ ಹಾರೈಸಿದರು.
ಸನ್ಮಾನ
ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಯಶೋಧರ ಗೌಡ, ಶ್ರೀರಾಂ ಪಕ್ಕಳ, ಅರ್ಷದ್ ದರ್ಬೆ ಹಗೂ ಯುಟ ತೌಸೀಫ್ ರವರನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾರಿಸ್ ನಲಪಾಡ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ನಲಪಾಡ್‍ರವರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ವೇದಿಕೆಯಲ್ಲಿ ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಝಲ್ ರಹೀಂ, ಮಹೇಶ್ ಅಂಕೊತ್ತಿಮಾರ್,ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ, ವೇದನಾಥ ಸುವರ್ಣ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ನಗರಸಭಾ ಸದಸ್ಯರಾದ ರಾಬಿನ್ ತಾವ್ರೋ, ಯೂಸುಫ್ ಡ್ರೀಮ್, ಎನ್‍ಎಸ್‍ಯುಐ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಮಾಜಿ ನಗರಸಭಾ ಅಧ್ಯಕ್ಷೆ ವಾಣಿಶ್ರೀಧರ್, ಅನಿಲ್ ಕುಮಾರ್ ಯಾದವ್, ನ್ಯಾಯವಾದಿ ವಿದ್ಯಾ ಬಾಲಕೃಷ್ಣ, ಗಿರೀಶ್ ಆಳ್ವ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಷದ್ ದರ್ಬೆ, ಇಂಟಕ್ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಶೆಟ್ಟಿ, ಸಿಝ್ಲರ್, ಮೆರಿಲ್ ರೇಗೋ, ಗೀತಾ ಕೊಲ್ಚಾರ್, ದಿವ್ಯಪ್ರಭಾ ಚಿಲ್ತಡ್ಕ, ಹನೀಫ್ ಪುಂಚತ್ತಾರ್, ಹಂಝತ್, ರವೂಫ್ ಸಾಲ್ಮರ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಅನ್ವರ್ ಖಾಸಿಂ, ಸಚಿನ್ ಬೆಳ್ಳಾರೆ, ಕೆ ಸಿ ಅಶೋಕ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ತವಿದ್ ಸಾಲ್ಮರ, ಕಮಲೇಶ್ ಸರ್ವೆ, ರಶೀದ್ ಮುರ, ಅಖಿಲ್ ಪುತ್ತೂರು, ಸಿದ್ದಿಕ್ ಸುಲ್ತಾನ್, ಸ್ವರ್ಣಲತಾ ಹೆಗ್ಡೆ, ಸಾಹಿರಾ ಜುಬೈರ್, ಗಣೇಶ್ ರಾವ್, ವಿಕೆ ಶರೀಫ್ ಬಪ್ಪಳಿಗೆ, ಬಶೀರ್ ಪರ್ಲಡ್ಕ, ಸಲೀಂ ಪಾಪು, ರವೂಫ್ ಸಾಲ್ಮರ, ಇಮ್ತಿಯಾಝ್ ಬಪ್ಪಳಿಗೆ, ದಿನೇಶ್ ಯಾದವ್ ಪಾಣಾಜೆ, ಬಿಕೆ ಅಬ್ದುಲ್ ರಹಿಮಾನ್ ಕೂರ್ನಡ್ಕ, ಇಸ್ಮಾಯಿಲ್ ಸಾಲ್ಮರ, ಶಬ್ಬೀರ್ ಕೆಂಪಿ ಮೊದಲಾದವರು ಉಪಸ್ಥಿತರಿದ್ದರು. ಬಾಲಕೃಷ್ಣ ರೈ ಮತ್ತು ಇಸಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.