‘ಅಕ್ಕಯ್’ ಕೃತಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು, ಮಾ.30: ಬಹುರೂಪಿ ಪ್ರಕಾಶನದ ಅಕ್ಕಯ್ ಪದ್ಮಶಾಲಿ ಅವರ ‘ಅಕ್ಕಯ್’ ಕೃತಿಗೆ ಪ್ರಕಟಣೆಯ ಉತ್ಕøಷ್ಟತೆಗಾಗಿ 2 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ಪಬ್ಲಿಷಿಂಗ್ ನೆಕ್ಸ್ಟ್ ಆಯೋಜಿಸಿದ್ದ ವಾರ್ಷಿಕ ಸ್ಪರ್ಧೆಯಲ್ಲಿ ‘ಅಕ್ಕಯ್’ ಕೃತಿಯು ಪ್ರಕಟಣೆಯ ಉತ್ಕೃಷ್ಟತೆಗಾಗಿ ಹಾಗೂ ಹಿ.ಚಿ. ಬೋರಲಿಂಗಯ್ಯ ಅವರ ‘ಕುಪ್ಪಳಿ ಡೈರಿ’ ಮುಖಪುಟ ವಿನ್ಯಾಸಕ್ಕಾಗಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.
ವಿವಿಧ ಪ್ರತಿಷ್ಠಿತ ಪ್ರಕಟಣಾ ಸಂಸ್ಥೆಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಅಂತಿಮವಾಗಿ `ಅಕ್ಕಯ್’ ಕೃತಿಯು ಪ್ರಕಟಣೆಯ ಉತ್ಕೃಷ್ಟತೆ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿತು. ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ(ಪಿ.ಆರ್.ಸಿ.ಐ) ನಡೆಸುವ ಸಾರ್ವಜನಿಕ ರಂಗದ ವಾರ್ಷಿಕ ಸ್ಪರ್ಧೆಯಲ್ಲಿ ಪುಸ್ತಕ ಪ್ರಟಕಣಾ ವಿಭಾಗದಲ್ಲೂ ‘ಅಕ್ಕಯ್’ ಕೃತಿಯು ಪ್ರಕಟಣೆಯಲ್ಲಿನ ಉತ್ಕೃಷ್ಟತೆಗಾಗಿ ಬೆಳ್ಳಿ ಪದಕ ಪಡೆದಿದೆ.
ಈ ಕೃತಿಯ ವಿನ್ಯಾಸಕ್ಕೆ ಎಸ್.ಎಂ.ಸಾಗರ್, ಅರುಣ್‍ಕುಮಾರ್, ಛಾಯಾಗ್ರಾಹಕ ಮನುಕುಮಾರ್, ರೀಗಲ್ ಪ್ರಿಂಟರ್ಸ್ ವೆಂಕಟೇಶ್ ಅವರ ಕೊಡುಗೆಯನ್ನು ಪರಿಗಣಿಸಲಾಗಿದೆ. ‘ಅಕ್ಕಯ್’ ಕೃತಿಯು ಸಾಮಾಜಿಕ ಕಾರ್ಯಕರ್ತೆ ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥೆಯನ್ನು ಪೆÇ್ರ.ಡೊಮಿನಿಕ್ ಡಿ. ಅವರು ನಿರೂಪಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.





