ಮಂಗಳೂರು: ಇಕ್ರಾ ಅರೆಬಿಕ್ ಸ್ಕೂಲ್ ವಾರ್ಷಿಕೋತ್ಸವ

ಮಂಗಳೂರು : ನಗರದ ಇಕ್ರಾ ಅರೆಬಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಹಾಗೂ ಹಾಫಿಝ್ ಪದವಿ ಪ್ರದಾನ ಸಮಾರಂಭ ಇಂದು ನಗರದ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬೋಳಂಗಡಿ ಹವ್ವಾ ಮಸೀದಿ ಖತೀಬ್ ಮೌಲಾನ ಹಯ್ಯಾ ತಂಙಳ್ ಮುಖ್ಯ ಅತಿಥಿಯಾಗಿ ಹಾಗೂ ದ.ಕ. ಮತ್ತು ಉಡುಪಿ ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಬ್ಯಾರಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.
ಬ್ಯಾರೀಸ್ ಗ್ರೂಪ್‌ನ ಉಪ ಆಡಳಿತ ನಿರ್ದೇಶಕರ ಸಿದ್ದೀಕ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಇಕ್ರಾ ಅರೆಬಿಕ್ ಸ್ಕೂಲ್‌ನ ಪ್ರಾಂಶುಪಾಲ ಸಾಲಿಮ್ ಖಾಲಿಫಾ ನದ್ವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ರಾಜ್ಯ, ಜಿಲ್ಲೆಗಳ 24 ಮಂದಿ ವಿದ್ಯಾರ್ಥಿಗಳಿಗೆ ಹಾಫಿಝ್ ಪದವಿ ನೀಡಿ ಗೌರವಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Next Story