ಐಎಂಎ ಸಂಸ್ಥೆಯಲ್ಲಿ ಅಡವಿಟ್ಟ ಚಿನ್ನದ ಆಭರಣ ಎ.6ರಿಂದ ಹಿಂತಿರುಗಿಸಲಾಗುತ್ತದೆ: ಸಕ್ಷಮ ಪ್ರಾಧಿಕಾರ ಪ್ರಕಟನೆ
ಬೆಂಗಳೂರು, ಮಾ.31: ಐಎಂಎ ಸಂಸ್ಥೆಯಲ್ಲಿ ಸಾಲಕ್ಕಾಗಿ ಅಡ ಇಟ್ಟ ಚಿನ್ನದ ಆಭರಣಗಳನ್ನು 2022ರ ಎ.6ರಿಂದ ಹಿಂತಿರುಗಿಸಲಾಗುವುದು. ಸಾಲಗಾರರು ಬಾಕಿ ಸಾಲದ ಹಣ ಹಾಗೂ ಇಲ್ಲಿಯವರೆಗಿನ ಭದ್ರತಾ ಶುಲ್ಕಗಳನ್ನು ಎ.5ರ ಸಂಜೆ 5ಗಂಟೆಯೊಳಗಾಗಿ ಪಾವತಿಸಬೇಕೆಂದು ವಿಶೇಷಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.
ನಿಮ್ಮ ಬಾಕಿ ಮೊತ್ತವನ್ನು ತಿಳಿದುಕೊಳ್ಳಲು ವೆಬ್‍ಸೈಟ್‍ನಲ್ಲಿ imaclaims.karnataka.gov.in ಗೆ ಹೋಗಿ ನಂತರ claim submission process
ಕ್ಲಿಕ್ ಮಾಡಿರಿ, ಇದರಲ್ಲಿ ima gold loan details ಆಯ್ಕೆ ಮಾಡಿಕೊಳ್ಳಿರಿ ಎಂದು ತಿಳಿಸಿದೆ.
ಪಾವತಿಸಬೇಕಾದ ಮೊತ್ತ ಬಾಕಿ ಇದ್ದಲ್ಲಿ NEFTಅಥವಾ RTGS ಮೂಲಕ ಮಾತ್ರ ಸಕ್ಷಮ ಪ್ರಾಧಿಕಾರದ ಬ್ಯಾಂಕ್ ಅಕೌಂಟಿಗೆ ಜಮಾ ಮಾಡಬೇಕು. ತದನಂತರ ಹಣ ಪಾವತಿಸಿದ UTRಸಂಖ್ಯೆಯನ್ನು ಮೇಲೆ ತಿಳಿಸಿರುವ ವೆಬ್‍ಲಿಂಕ್‍ನಲ್ಲಿ ನಮೂದಿಸಬೇಕು. ಈ ರೀತಿ UTR ವಿವರಗಳನ್ನು ನಮೂದಿಸಿದ ನಂತರ ರಜಾ ದಿನಗಳನ್ನು ಹೊರತುಪಡಿಸಿ, ಒಂದು ದಿನದೊಳಗೆ ಅಡವಿಟ್ಟ ಚಿನ್ನಾಭರಣಗಳನ್ನು ಹಿಂಪಡೆಯಲು ನಿಗದಿಪಡಿಸಿದ ದಿನಾಂಕ ಮತ್ತು ಸಮಯವನ್ನು ನಿಮಗೆ ಮೊಬೈಲ್ ಸಂದೇಶದ ಮೂಲಕ ತಿಳಿಸಲಾಗುವುದು. ಒಂದು ವೇಳೆ ಈ ರೀತಿಯ ಸಂದೇಶ ಸ್ವೀಕೃತವಾಗದೇ ಇದ್ದಲ್ಲಿ 080-29565353, 080-29566556, 080-29604556 ಈ ನಂಬರ್ ಗಳಿಗೆ ಫೋನ್ ಮಾಡಿ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ನಿಮ್ಮ ಹೆಸರು, ಸಿಎಂಎಸ್ ನಂಬರ್/ಕಸ್ಟಮರ್ ಐಡಿ ಮತ್ತು ಯುಟಿಆರ್ ನಂಬರ್‍ನ್ನು 7975568880 ಮೊಬೈಲ್ ಸಂಖ್ಯೆಗೆ ವ್ಯಾಟ್ಸಮ್ ಮಾಡಬಹುದು.
ಸಕ್ಷಮ ಪ್ರಾಧಿಕಾರದ ಬ್ಯಾಂಕ್ ವಿವರ: ಹೆಚ್‍ಡಿಎಫ್‍ಸಿ ಬ್ಯಾಂಕ್, ವಿಲ್ಸನ್ ಗಾರ್ಡನ್ ಶಾಖೆ, ಚಾಲ್ತಿಯಲ್ಲಿಯಲ್ಲಿರುವ ಅಕೌಂಟ್ ನಂಬರ್: 6442116442, IFSC Code 0001748. ಆಭರಣಗಳನ್ನು ಹಿಂತಿರುಗಿಸುವ ಸ್ಥಳ: ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಚೇರಿ, 3ನೆ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಡಾ.ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು-1. ಯಾವುದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-46885959ಗೆ ಕರೆ ಮಾಡಬಹುದು ಎಂದು ಸಕ್ಷಮ ಪ್ರಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದೆ.







