ಎ.4ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಕುಂದಾಪುರ : ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ಉಡುಪಿ ಇದರ ನೇತೃತ್ವದಲ್ಲಿ ಆಲೂರು ಗ್ರಾಮ ಮತ್ತು ಸ್ಥಳೀಯ 23 ಭೂರಹಿತ ಕೊರಗ ಕುಟುಂಬಗಳಿಗೆ ಡಾ.ಮಹಮದ್ ಪೀರ್ ವರದಿ ಪ್ರಕಾರ ಪ್ರತಿ ಕುಟುಂಬಕ್ಕೆ ತಲಾ ಕನಿಷ್ಠ ಎರಡು ಎಕರೆ ಭೂಮಿ ನೀಡಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಎ.೪ರಿಂದ ಆಲೂರು ಗ್ರಾಪಂ ಕಚೇರಿ ಎದುರು ಹಮ್ಮಿಕೊಳ್ಳಲಾಗಿದೆ.
ಕಳೆದ ೬ ವರ್ಷದಿಂದ ಕೊರಗ ಸಮುದಾಯದ ೨೩ ಭೂರಹಿತ ಕುಟುಂಬ ಗಳಿಗೆ ಭೂಮಿ ನೀಡಲು ಒತ್ತಾಯಿಸಿ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ನೀಡಲಾಗಿದೆ. ತಾಲೂಕು ಕಚೇರಿ ಎದುರು ಹಲವು ಬಾರಿ ಪ್ರತಿಭಟನೆ ನಡೆಸ ಲಾಗಿದೆ. ಅಲ್ಲದೆ ೨೦೧೬ ಮತ್ತು ೨೦೨೨ರಲ್ಲಿ ಎರಡು ಬಾರಿ ಉಡುಪಿ ಜಿಲ್ಲಾಧಿಕಾರಿಯವರಿಂದ ಕುಂದಾಪುರ ತಹಶೀಲ್ದಾರರವರಿಗೆ ಭೂಮಿ ನೀಡಲು ಶಿಫಾರಸು ಮಾಡಿದ್ದಾರೆ. ಆದರೆ ಇಚ್ಛಾಶಕ್ತಿ ಕೊರತೆಯಿಂದ ಕೊರಗ ಸಮು ದಾಯದ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಆದರಿಂದ ನ್ಯಾಯ ಸಿಗುವ ವರೆಗೆ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.





