ವಿಶ್ವಕರ್ಮ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ

ಸುಧಾಕರ ಆಚಾರ್ಯ
ಉಡುಪಿ : ಚಿಟ್ಪಾಡಿ ಮಂಚಿಯ ವಿಶ್ವಕರ್ಮ ಸೇವಾ ಸಂಘದ2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಧಾಕರ ಆಚಾರ್ಯ ಕುಕ್ಕಿಕಟ್ಟೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಶೇಖರ ಆಚಾರ್ಯ ಮುಚ್ಚಿಲ್ಕೋಡು, ಉಪಾಧ್ಯಕ್ಷ ರಾಗಿ ಜನಾರ್ದನ ಎಸ್.ಆಚಾರ್ಯ,ಸತೀಶ ಆಚಾರ್ಯ, ಮಹೇಶ ಆಚಾರ್ಯ ಮಂಚಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಎಸ್.ಆಚಾರ್ಯ ಮುಚ್ಚಿಲ್ ಕೋಡು, ಜತೆ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಬುಡ್ನಾರು, ಪದ್ಮನಾಭ ಆಚಾರ್ಯ ಚಿಟ್ಪಾಡಿ, ವಿಕ್ರಮ್ ಆಚಾರ್ಯ ಇಂದಿರಾನಗರ, ನಿಶ್ಚಿತ್ ಆಚಾರ್ಯ ಮಂಚಿ ಹಾಗೂ ಕೋಶಾಧಿಕಾರಿಯಾಗಿ ಅಶೋಕ ಆಚಾರ್ಯ ಚಿಟ್ಪಾಡಿ ಆಯ್ಕೆಯಾಗಿದ್ದಾರೆ.
ಕ್ರೀಡಾ ಕಾರ್ಯದರ್ಶಿಯಾಗಿ ದಯಾನಂದ ಆಚಾರ್ಯ, ಮಂಜುನಾಥ ಆಚಾರ್ಯ ಕಲ್ಯಾಣನಗರ, ಟಿ.ಜಿ. ಪ್ರಭಾಕರ ಆಚಾರ್ಯ, ವಾದಿರಾಜ ಆಚಾರ್ಯ ಮಂಚಿ, ಪ್ರದೀಪ್ ಆಚಾರ್ಯ , ಪ್ರಸಾದ್ ಆಚಾರ್ಯ, ದಿವಾಕರ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ವಾಸುದೇವ ಆಚಾರ್ಯ, ವ್ಯಾಸರಾಯ ಆಚಾರ್ಯ ಬೈಲೂರು, ಪ್ರಸನ್ನ ಆಚಾರ್ಯ ಮಂಚಿ, ಆಂತರಿಕ ಲೆಕ್ಕಪರಿಶೋಧಕರಾಗಿ ಭಾಸ್ಕರ ಆಚಾರ್ಯ, ಗೌರವ ಸಲಹೆಗಾರರಾಗಿ ಗಂಗಾಧರ ಆಚಾರ್ಯ ಆಯ್ಕೆಯಾಗಿದ್ದಾರೆ.