ಭಾರತೀಯ ಯುವ ಸಂಶೋಧಕರಿಗೆ ಆವಿಷ್ಕಾರ ಸ್ಪರ್ಧೆ
ಉಡುಪಿ : ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಸಂಸ್ಥೆಗಳ ಜಾಲ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವರ ಸಹಯೋಗದೊಂದಿಗೆ, ೧೪ ರಿಂದ ೩೦ ವರ್ಷದೊಳಗಿನ ಯುವ ಸಂಶೋಧಕರಿಗೆ ಎ.೧೬ ಮತ್ತು ೧೭ರಂದು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಯುವ ಸಂಶೋಧಕರಿಗೆ ಆವಿಷ್ಕಾರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ವಿಜ್ಞಾನದ ಹಲವು ವಿಷಯ ಗಳಿಗೆ ಸಂಬಂಧಿಸಿದ ಸ್ಥಳೀಯ ಸಮಸ್ಯೆಗಳನ್ನು ಆಯ್ದು ಅವುಗಳಿಗೆ ವೈಜ್ಞಾನಿಕ ಪರಿಹಾರವನ್ನು ಸೂಚಿಸಲು ಯುವ ಸಂಶೋಧಕರಿಗೆ ಅವಕಾಶ ಕಲ್ಪಿಸಲಾ ಗುವುದು.
ಸ್ಫರ್ಧೆಯು ಪ್ರಾದೇಶಿಕ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗ ಲಿದ್ದು, ರಾಷ್ಟ್ರಮಟ್ಟದ ಸ್ಪರ್ಧೆಯು ಮೇ ೧೧ ಹಾಗೂ ೧೨ರಂದು ಗುಜರಾತ್‌ನ ಸಿಗ್ಮಾ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಗೂಗಲ್ ಫಾರ್ಮ್ ಲಿಂಕ್ - https://forms.gle/i8zomT8E6Zw2bPdp9-ನಲ್ಲಿ ಹೆಸರು ನೋಂದಾಯಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.ನಂ: ೯೪೮೩೫೪೯೧೫೯, ೯೪೪೮೮೩೦೪೫೪ ಅನ್ನು ಸಂಪರ್ಕಿಸುವಂತೆ ಕರ್ನಾಟಕ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ ಕಡ್ಲೇವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.