ನಾಪತ್ತೆ

ಉಡುಪಿ : ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ನಿವಾಸಿ ತುಕಾರಾಮ ಶೆಟ್ಟಿಗಾರ್ (೫೨) ಎಂಬುವರು ಮಾರ್ಚ್ 29ರಂದು ರಾತ್ರಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಬಳಿ ಯಕ್ಷಗಾನ ನೋಡಲು ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
೫ ಅಡಿ ೨ ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು ಮಲೆಯಾಳಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೋಲೀಸ್ ಠಾಣೆ ದೂ.ಸಂಖ್ಯೆ:೦೮೨೫೪-೨೫೮೨೩೩, ಮೊ.ನಂ: ೯೪೮೦೮೦೫೪೬೦, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: ೦೮೨೫೪-೨೫೧೦೩೧, ಮೊ.ನಂ: ೯೪೮೦೮೦೫೪೩೪, ಕಂಟ್ರೋಲ್ ರೂಂ ೧೦೦ (೦೮೨೦-೨೫೨೬೪೪೪) ಅನ್ನು ಸಂಪರ್ಕಿಸುವಂತೆ ಕೊಲ್ಲೂರು ಪೋಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





