Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಹಿಜಾಬ್; ಸಮಸ್ತದಿಂದ ಸುಪ್ರೀಂ ಕೋರ್ಟಿಗೆ...

ಹಿಜಾಬ್; ಸಮಸ್ತದಿಂದ ಸುಪ್ರೀಂ ಕೋರ್ಟಿಗೆ ಮೊರೆ; ಎಂ.ಟಿ. ಉಸ್ತಾದ್

ಶಂಸುಲ್ ಉಲಮಾ ವಿಮೆನ್ಸ್ ಶರೀಅತ್ ಕಾಲೇಜ್‌ನ ಸನದುದಾನ ಸಮ್ಮೇಳನ

ವಾರ್ತಾಭಾರತಿವಾರ್ತಾಭಾರತಿ1 April 2022 9:54 PM IST
share
ಹಿಜಾಬ್; ಸಮಸ್ತದಿಂದ ಸುಪ್ರೀಂ ಕೋರ್ಟಿಗೆ ಮೊರೆ; ಎಂ.ಟಿ. ಉಸ್ತಾದ್

ಉಪ್ಪಿನಂಗಡಿ : ಮಹಿಳೆಯರು ತಲೆ ಮುಚ್ಚಬೇಕೆಂಬ ನಿಯಮವು ಮುಸ್ಲಿಮರ ಮಧ್ಯೆ ಯಾವುದೇ ಅಭಿಪ್ರಾಯ ವ್ಯತ್ಯಾಸ ಇಲ್ಲದ ಧರ್ಮದ ಒಂದು ಆಚಾರ ಪದ್ದತಿಯಾಗಿದೆ. ಇದು ಯಾವುದೇ ಇತರ ಧರ್ಮೀಯರ ವಿರುದ್ದವಾಗಿಲ್ಲ. ಇಸ್ಲಾಂ ಧರ್ಮದಲ್ಲಿ ಹಿಜಾಬ್ ಅಗತ್ಯ ಇಲ್ಲ ಎಂಬ ರಾಜ್ಯ ಹೈಕೋರ್ಟ್ ತೀರ್ಪನ್ನು  ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ  ’ಸಮಸ್ತ ಉಲಮಾ ಒಕ್ಕೂಟ’ ಮೇಲ್ಮನವಿ ಸಲ್ಲಿಸಿದೆ ಎಂದು ’ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ  ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ. ಉಸ್ತಾದ್ ಹೇಳಿದ್ದಾರೆ.

ಉಪ್ಪಿನಂಗಡಿ ಸಮೀಪದ ಕೆಮ್ಮಾರ ಶಕ್ತಿನಗರದಲ್ಲಿರುವ ಶಂಸುಲ್ ಉಲಮಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧೀನದ ಶಂಸುಲ್ ಉಲಮಾ ವುಮೆನ್ಸ್ ಶರೀಅತ್ ಕಾಲೇಜ್‌ನ ದ್ವಿತೀಯ ಸನದುದಾನ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣಗೈದರು.

ಇಸ್ಲಾಂ ಶಾಂತಿಯ ಧರ್ಮವಾಗಿದೆ. ಯಾವುದೇ ಸಂದರ್ಭದಲ್ಲಿ ಸಹನೆ ಕೈ ಬಿಡಬಾರದು. ಯಾವುದೇ ಸಮಸ್ಯೆಗಳಿದ್ದರೂ ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯ ವಾಗಿದೆ. ಯಾರೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಹೆಣ್ಮಕ್ಕಳಿಗೆ ಪಿಯು, ಡಿಗ್ರಿ ಶಿಕ್ಷಣದೊಂದಿಗೆ  ಶರೀಅತ್ ಕೋರ್ಸನ್ನು ನೀಡುವ ’ಫಾಳಿಲಾ’ ಮತ್ತು ’ಫಳೀಲಾ’ ಕೋರ್ಸ್ ಗಳನ್ನು   ’ಸಮಸ್ತ’ ದ ಅಧೀನದಲ್ಲಿ ಆರಂಭಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಜಿ ಎಸ್.ಬಿ.ಮುಹಮ್ಮದ್ ದಾರಿಮಿ ಹೆಣ್ಮಕ್ಕಳಿಗೆ ಸಮನ್ವಯ ಶಿಕ್ಷಣ ನೀಡುವ ’ಫಾಳಿಲಾ’ ಕೋರ್ಸ್  ಸಮಾಜದಲ್ಲಿ ಸುಶಿಕ್ಷಿತ ಮಹಿಳೆಯರನ್ನು ರೂಪಿಸುತ್ತಿದೆ. ಈಗಾಗಲೇ ಎರಡು ಬ್ಯಾಚ್‌ನ ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಪೂರೈಸಿದ್ದಾರೆ.
ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಹಲವಾರು ಹೊಸ ಶೈಕ್ಷಣಿಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಸೈಯದ್ ಜುನೈದ್ ಜಿಫ್ರಿ ತಂಳ್ ಆತೂರು ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ವೆಸ್ಟ್ ಅಧ್ಯಕ್ಷ ಸೈಯದ್  ಅಮೀರ್ ತಂಳ್ ಕಿನ್ಯ ದುಆಶೀರ್ವಚನ ನೀಡಿದರು.

ಹನೀಫಿ ಉಲಮಾ ಒಕ್ಕೂಟದ ಅಧ್ಯಕ್ಷ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಪ್ರಸ್ತಾವಿಕವಾಗಿ ಮಾತನಾಡಿದರು.   ಗಂಡಿಬಾಗಿಲು ಮಸೀದಿಯ ಖತೀಬ್ ಶೌಖತ್ತಲಿ ಫೈಝಿ, ಉಪ್ಪಿನಂಗಡಿ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಮಾತನಾಡಿದರು.

ಶರೀಅತ್ ಪದವಿ ಮುಗಿಸಿದ ೨೨ ವಿದ್ಯಾರ್ಥಿನಿಯರಿಗೆ ’ಫಾಳಿಲಾ’ ಪದವಿ ಪ್ರದಾನ ಮಾಡಲಾಯಿತು. ಕಾಲೇಜ್‌ನ ಮಾಹಿತಿ ಪತ್ರವನ್ನು ಸಂಸ್ಥೆಯ ಸಂಚಾಲಕ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಬಿಡುಗಡೆ ಗೊಳಿಸಿದರು. ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮ್ಮೇಳನ ಪ್ರಯುಕ್ತ ವಿದ್ಯಾರ್ಥಿನಿಯರು ಹೊರತಂದ ವಿಶೇಷ ಪುರವಣಿಯನ್ನು ಶೈಖುನಾ ಎಂ.ಟಿ.ಉಸ್ತಾದ್ ಬಿಡುಗಡೆ ಗೊಳಿಸಿದರು.

’ಸಮಸ್ತ’ದ ಅಗಲಿದ ನಾಯಕರ ಅನುಸ್ಮರಣೆ ನಡೆಸಲಾಯಿತು. ಶಿಕ್ಷಣ ತಜ್ಞರಾದ ರಫೀಕ್ ಮಾಸ್ಟರ್ ಆತೂರು ಮತ್ತು ಹನೀಫ್ ಪುತ್ತೂರು ವಿದ್ಯಾರ್ಥಿ ಮತ್ತು ಪೋಷಕರಿಗೆ ಮಾಹಿತಿ ತರಬೇತಿ ನಡೆಸಿಕೊಟ್ಟರು. ಕಾಲೇಜ್ ಉಪನ್ಯಾಸಕಿಯರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಿಂದ ಇಸ್ಲಾಮಿಕ್ ಕಲಾ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದಲ್ಲಿ ಕಾಲೇಜ್‌ನ ಪ್ರಾಂಶುಪಾಲ ಹನೀಫ್ ದಾರಿಮಿ, ಆತೂರು ರೇಂಜ್ ಅಧ್ಯಕ್ಷ ಹನೀಫ್ ಫಾಝಿಲ್ ಹನೀಫಿ ಆತೂರು, ಕಾರ್ಯದರ್ಶಿ ಸಿದ್ದೀಕ್ ಫೈಝಿ ಕರಾಯ, ಮುನೀರ್ ಅನ್ವರಿ ಕುಂಡಾಜೆ, ಝಕರಿಯಾ ಮುಸ್ಲಿಯಾರ್, ಜಾಬಿರ್ ಫೈಝಿ ನೀರಾಜೆ, ಅಶ್ರಫ್ ರಹ್ಮಾನಿ ವೀರಮಂಗಿಲ, ಗಂಡಿಬಾಗಿಲು ಜಮಾಅತ್ ಅಧ್ಯಕ್ಷ ಆದಂ ಹಾಜಿ ಬಡ್ಡಮೆ, ಕಾರ್ಯದರ್ಶಿ ಎಸ್. ಆದಂ ಹಾಜಿ, ಹಸೈನಾರ್ ಹಾಜಿ ಕೊಯಿಲ, ಜಿಲ್ಲಾ ಎಸ್‌ವೈಎಸ್ ನಾಯಕ ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ, ಬಿ.ಕೆ. ಮುಹಮ್ಮದ್ ಹಾಜಿ ಕುಂಡಾಜೆ, ಎನ್. ಇಸ್ಹಾಕ್ ಶಕ್ತಿನಗರ, ಹುಸೈನ್ ಬಡಿಲ, ರಫೀಕ್ ಹಾಜಿ ಗಂಡಿಬಾಗಿಲು, ಪತ್ರಕರ್ತರಾದ ಸಿದ್ದೀಕ್ ನೀರಾಜೆ, ನಝೀರ್ ಕೊಯಿಲ, ಇಸ್ಮಾಯಿಲ್ ಕೆಮ್ಮಾರ, ಖಲಂದರ್ ಗಂಡಿಬಾಗಿಲು, ಇಸ್ಮಾಯಿಲ್ ತಂಳ್ ಉಪ್ಪಿನಂಗಡಿ, ಹಸೈನಾರ್ ಹಾಜಿ ಹಿರೆಬಂಡಾಡಿ, ಪಿ. ಆದಂ ಹಾಜಿ, ಹೈದರ್ ಕಲಾಯಿ, ಇಸ್ಹಾಕ್ ಹಾಜಿ ತೋಡಾರ್, ಅಹ್ಮದ್ ಕುಂಞಿ, ಶಾಹುಲ್ ಹಮೀದ್ ಕುಂಡಾಜೆ, ಯೂಸುಫ್ ನೀರಾಜೆ, ಝುಬೈರ್ ಆತೂರು, ನಝೀರ್ ಕೆ., ಯೂಸುಫ್ ನೀರಾಜೆ, ಅಬ್ದುಲ್ ಲತೀಫ್, ಬಿ.ಕೆ. ಅಬ್ದುಲ್ ಅಝೀಝ್, ನಝೀರ್, ಬಿ.ಕೆ.ಅಬ್ದುಲ್ ರಝಾಕ್, ಅಶ್ರಫ್ ಕೋರಪದವು, ಯೂಸುಫ್ ಹಾಜಿ ಪದಮಾಲೆ, ಅಬ್ದುಲ್ ರಹಿಮಾನ್ ಯುನಿಕ್, ಸಿದ್ದೀಕ್ ಎನ್, ಇಬ್ರಾಹಿಂ ಬಡಿಲ, ಬಶೀರ್ ಉಪಸ್ಥಿತರಿದ್ದರು.

ಸಂಸ್ಥೆಯ ಕೋಶಾಧಿಕಾರಿ ಹಸೈನಾರ್ ಹಾಜಿ ಕೊಯಿಲ ಧ್ವಜಾರೋಹಣಗೈದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಝಲುದ್ದೀನ್ ಹೇಂತಾರ್ ಸ್ವಾಗತಿಸಿದರು. ಶಿಕ್ಷಕ ಅಬ್ದುಲ್ ರಝಾಕ್ ದಾರಿಮಿ ವಂದಿಸಿದರು.  ರಫೀಕ್ ಆತೂರು ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X