ಮೈಸೂರಿನ ಆಲನಹಳ್ಳಿಯ ತಿಪ್ಪಯ್ಯನ ಕೆರೆಯಲ್ಲಿ ಕಲುಷಿತ ನೀರು: ಮೀನು ಮತ್ತು ಬಾತುಕೋಳಿಗಳ ಸಾವು
ಮೈಸೂರು: ಮೈಸೂರಿನ ಆಲನಹಳ್ಳಿ ಹೊರವಲಯದ ತಿಪ್ಪಯ್ಯನ ಕೆರೆಯಲ್ಲಿ ಮೀನುಗಳು ಮತ್ತು ಬಾತುಕೋಳಿಗಳು ಸಾವನ್ನಪ್ಪಿದ್ದು, ಕೆರೆಯಲ್ಲಿ ನೀರು ಕಲುಷಿತವಾಗಿದ್ದರಿಂದ ಮೃತಪಟ್ಟಿವೆ ಎಂಬ ಆರೋಪ ಕೇಳಿಬಂದಿದೆ.
ಮೈಸೂರಿನ ಆಲನಹಳ್ಳಿ ಹೊರವಲಯದ ತಿಪ್ಪಯ್ಯನ ಕೆರೆಗೆ ಯುಜಿಡಿ ನೀರು ಸೇರುತ್ತಿದೆ ಎಂದು ಆರೋಪಿಸುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕೆರೆ ಮೈಸೂರಿನ ಮೃಗಾಲಯ ನಿರ್ವಹಣೆಯಲ್ಲಿದೆ. ಸದ್ಯ ಸ್ಥಳಕ್ಕೆ ಮೃಗಾಲಯದ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Next Story





