ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಗೆ ಆಯ್ಕೆ

ಸುಭಾಶ್ಚಂದ್ರ ಶೆಟ್ಟಿ
ಮಂಗಳೂರು : ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದ.ಕ. ಜಿಲ್ಲಾ ಸಂಯೋಜಕರನ್ನಾಗಿ ಸುಭಾಶ್ಚಂದ್ರ ಶೆಟ್ಟಿ ಅವರನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯಾಧ್ಯಕ್ಷ ಸಿ.ನಾರಾಯಣ ಸ್ವಾಮಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸುಭಾಶ್ಚಂದ್ರ ಶೆಟ್ಟಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಕೊಲ್ನಾಡು ಗ್ರಾಪಂನಲ್ಲಿ ೬ ಬಾರಿ ಸದಸ್ಯರಾಗಿ, ೨ ಬಾರಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದ್ದರು.
ಕೇಂದ್ರ ಸರಕಾರದ ರಾಷ್ಟ್ರೀಯ ನಿರ್ಮಲ ಪುರಸ್ಕಾರ, ರಾಜ್ಯ ಸರಕಾರದ ನಮ್ಮ ಗ್ರಾಮ ನಮ್ಮ ಯೋಜನಾ ಪುಸ್ಕಾರ, ೨ ಬಾರಿ ರಾಜ್ಯ ಮಟ್ಟದ ಗಾಂಧಿ ಪುರಸ್ಕಾರ, ೩ ಬಾರಿ ಜಿಲ್ಲಾ ಮಟ್ಟದ ನರೇಗಾ ಹಾಗೂ ಸಮುದಾಯ ಶೌಚಾಲಯ ಆಂದೋಲನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿವಿಧ ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಸುಭಾಶ್ಚಂದ್ರ ಶೆಟ್ಟಿ ಪ್ರಸ್ತುತ ವಿಟ್ಲ ಪಡ್ನೂರು ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.