ಇಂಧನ ಕ್ಷಮತೆಯ ಸಾಧನೆಗಾಗಿ ಕೆಎಸ್ಸಾರ್ಟಿಸಿಗೆ ಪ್ರಶಸ್ತಿ

ಬೆಂಗಳೂರು, ಎ.1: ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯು ಇಂಧನ ಕ್ಷಮತೆಯ ಸಾಧನೆಗಾಗಿ ನೀಡುವ ಪ್ರಶಸ್ತಿಗೆ ಕೆಎಸ್ಸಾರ್ಟಿಸಿ ಹಾಗೂ ಅತ್ಯುತ್ತಮ ಘಟಕಗಳ ಪ್ರಶಸ್ತಿಯನ್ನು ನಿಗಮದ ಮಂಗಳೂರು ವಿಭಾಗದ 2ನೇ ಘಟಕ, ಬನ್ನಿಮಂಟಪ ಘಟಕ, ಮೈಸೂರು ವಿಭಾಗ, ಬೆಂ.ಕೇ.ವಿ ಘಟಕ-2 ಘಟಕಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ಎ.11ರಂದು ನವದೆಹಲಿಯ ಇಂಡಿಯಾ ಹ್ಯಾಬಿಟೇಟ್ ಸೆಂಟರ್ ನಲ್ಲಿ ಆಯೋಜಿಸಲಿರುವ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಇಂಧನ ಕ್ಷಮತಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.
ಕೆಎಸ್ಸಾರ್ಟಿಸಿಗೆ 5 ಲಕ್ಷ ರೂ. ನಗದು ಬಹುಮಾನ ಮತ್ತು ಕೆಎಂಪಿಎಲ್‍ನಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವ ನಿಗಮದ ಘಟಕಗಳಿಗೆ ತಲಾ 75 ಸಾವಿರ ರೂ.ಗಳನ್ನು ವಿತರಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದೆ.
Next Story





