ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರು ಹಾವಳಿ: ನಿಯಂತ್ರಣ ಮಸೂದೆ ಅಂಗೀಕರಿಸಿದ ಗುಜರಾತ್ ವಿಧಾನಸಭೆ

ಹೊಸದಿಲ್ಲಿ, ಎ. 1: ನಗರ ಪ್ರದೇಶದ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರುಗಳನ್ನು ನಿಯುಂತ್ರಿಸುವ ಉದ್ದೇಶ ಹೊಂದಿದ ಮಸೂದೆಯನ್ನು ಗುಜರಾತ್ ವಿಧಾನ ಸಭೆ ಶುಕ್ರವಾರ ಅಂಗೀಕರಿಸಿದೆ.
ಆರು ಗಂಟೆಗಳ ಚರ್ಚೆಯ ಬಳಿಕ ಗುಜರಾತ್ ವಿಧಾನ ‘‘ಸಭೆ ಗುಜರಾತ್ ನಗರ ಪ್ರದೇಶದಲ್ಲಿ ಜಾನುವಾರು ನಿಯಂತ್ರಣ ಮಸೂದೆ-2022’’ ಅನ್ನು ಅಂಗೀಕರಿಸಿತು. ಕಾಂಗ್ರೆಸ್ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿತು ಹಾಗೂ ಹಿಂಪಡೆಯುವಂತೆ ಆಗ್ರಹಿಸಿತು. ಈ ಮಸೂದೆಯಂತೆ ನಗರ ಪ್ರದೇಶದಲ್ಲಿ ಗೋವು, ಎಮ್ಮೆ, ಆಡು, ಕುರಿ, ಕತ್ತೆ ಹಾಗೂ ಇತರ ಪ್ರಾಣಿಗಳನ್ನು ಸಾಕಲು ಜಾನುವಾರು ಸಾಕುವವರು ಪರವಾನಿಗೆ ಪಡೆಯಬೇಕಾದ ಅಗತ್ಯತೆ ಇದೆ.
ಈ ಪ್ರಸ್ತಾವಿತ ಕಾನೂನು ಅಹ್ಮದಾಬಾದ್, ವಡೋದರಾ, ಸೂರತ್, ರಾಜ್ಕೋಟ್, ಭಾವನಗರ, ಜುನಾಗಢ, ಜಾಮ್ನಗರ್ ಹಾಗೂ ಗಾಂಧಿನಗರ-ಹೀಗೆ 8 ಮಹಾನಗರ ಪಾಲಿಕೆ ಹಾಗೂ 162 ನಗರ ಸಭೆ ವ್ಯಾಪ್ತಿಗೆ ಅನ್ವಯವಾಗುತ್ತದೆ.
Next Story





