ಉಳ್ಳಾಲ ರಹ್ಮಾನಿಯ ಜುಮಾ ಮಸೀದಿಯ ನವೀಕೃತ ಮಸೀದಿ ಉದ್ಘಾಟನೆ

ಉಳ್ಳಾಲ: ರಹ್ಮಾನಿಯ ಜುಮಾ ಮಸೀದಿಯ ನವೀಕೃತ ಮಸೀದಿ ಉದ್ಘಾಟನೆ ಕಾರ್ಯಕ್ರಮ ಪೇಟೆ ಮಸೀದಿ ವಠಾರದಲ್ಲಿ ಗುರುವಾರ ನಡೆಯಿತ್ತು.
ಮಸೀದಿಯ ಉದ್ಘಾಟನೆಯನ್ನು ಕೆ.ಎಸ್ ಆಟಕೋಯ ತಂಙಳ್ ಕೊಂಬುಳ್ ಅವರು ನಿರ್ವಹಿಸಿ ದುವಾ ನೆರೆವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ ಉಳ್ಳಾಲ ಪೇಟೆ ಮಸೀದಿ ಬಹಳಷ್ಟು ಇತಿಹಾಸವಿರುವ ಮಸೀದಿ. ಈ ಮಸೀದಿಯನ್ನು ಇದಕ್ಕೂ ಮೊದಲು ಕುಚ್ಚಿಕಾಡು ಮಸೀದಿ ಎಂದು ಕರೆಯುತ್ತಿದ್ದರು ಇದರ ಅರ್ಥ ಕುಚ್ಚಿ ಎಂಬ ಹೆಸರಿನ ಮರಗಳನ್ನು ಹೊಂದಿರುವ ಕಾಡು. ಆ ಸಮಯದಲ್ಲಿ ಸ್ಥಳೀಯ ಪರಿಸರದ ಜನರು ಕಟ್ಟಿಸಿದಂತಹ ಮಸೀದಿ ಪೇಟೆ ಮಸೀದಿ.
ಮಸೀದಿ ಹೊಸ ನವೀಕೃತ ಉದ್ಘಾಟನೆಯಾಗಳು ಮಸೀದಿಯ ಆಡಳಿತ ಮಂಡಳಿ ಮತ್ತು ಪರಿಸರದ ಸಂಘ ಸಂಸ್ಥೆಗಳು ಪಾತ್ರ ಬಹಳ ಮುಖ್ಯವಾದದ್ದು. ಉಳ್ಳಾಲ ಊರೂಸ್ ಸಮಯದಲ್ಲಿ ನಡೆದಂತಹ ಸರ್ವಧರ್ಮ ಮತ್ತು ಭೋಜನ ಕಾರ್ಯಕ್ರಮ ಆದನಂತರ ಉಳ್ಳಾಲ ಪೇಟೆ ಮಸೀದಿ ಚರಿತ್ರೆಯನ್ನು ನಿರ್ಮಾಣ ಮಾಡಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಸ್ಥಳೀಯ ವೀರಭದ್ರ ದೇವಸ್ಥಾನದ ಅಧ್ಯಕ್ಷ ಮತ್ತು ಸ್ಥಳೀಯ ಪರಿಸರದ ಹಿಂದೂ ಸಹೋದರರು ಭಾಗವಹಿಸಿದ್ದು ಉಳ್ಳಾಲ ಎಂಬುವುದು ಕೋಮುಸೂಕ್ಷ್ಮ ಪ್ರದೇಶವಲ್ಲಾ, ಉಳ್ಳಾಲ ಶಾಂತಿ ಪ್ರೀಯರ ನಾಡು ಎಂಬುವುದು ಮನಸ್ಸಿಗೆ ಶುಭವನ್ನು ತಂದಿದೆ ಎಂದು ಹೇಳಿದರು.
ಉಳ್ಳಾಲ ಶಾಸಕ ಯು.ಟಿ ಅಬ್ದುಲ್ ಖಾದರ್ ಅವರು ಮಾತನಾಡಿ, ಉಳ್ಳಾಲ ಪೇಟೆ ಭವ್ಯವಾದ ಜುಮಾ ಮಸೀದಿ ಸಮಾಜದಲ್ಲಿ ಮತ್ತು ಸಮುದಾಯದಲ್ಲಿ ಪ್ರೀತಿ ಸಂಪತ್ತು ತುಂಬಲಿ. ಈ ಪ್ರದೇಶದ ಯುವಕರು, ಹಿರಿಯ ಮತ್ತು ಉಲಮಾಗಳ ಮಾರ್ಗದರ್ಶನದಿಂದ ಪ್ರೀತಿ ಸೌಹಾರ್ದತೆಯಿಂದ ನಡೆಯಲು ಸಲಹೆ ನೀಡಿದರು.
ಮಸೀದಿ ಕಾಮಗಾರಿಗೆ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳಾವಕಾಶ ನೀಡಿದ ಟಿ.ಡಿ. ಸ್ಟೋರ್ ಮಾಲಕರನ್ನು ಸನ್ಮಾನಿಸಲಾಯಿತು. ಹಾಗೂ ಇತರ ಕೆಲವು ಸಾಧಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ. ಎಸ್ ಶೈಖುನ ಉಸ್ಮಾನುಲ್ ಫೈಝಿ ತೋಡಾರು, ಇನಾಯತ್ ಆಲಿ, ಕೊಡಿ ಮಸೀದಿ ಖಾತಿಬ್ ಆದಂ ಫೈಝಿ, ಉಳ್ಳಾಲ ವೀರಭದ್ರ ದೇವಸ್ಥಾನದ ಅಧ್ಯಕ್ಷ ಆಯಿತಪ್ಪ ಶೆಟ್ಟಿಗಾರ್, ರವೀಂದ್ರನಾಥ್ ಉಳ್ಳಾಲ, ಸತೀಶ್ ಉಳ್ಳಾಲ, ಹೋಟೆಲ್ ಮಾಲಕ ಮಂಜುನಾಥ್, ಉಳ್ಳಾಲ ಜುಮಾ ಮಸೀದಿ ಉಪಾಧ್ಯಕ್ಷ ಯು.ಕೆ ಮೋನು, ಉಳ್ಳಾಲ ದರ್ಗಾ ಸಯ್ಯದ್ ಅರಬಿಕೆ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಕೋಟೆಪುರ ಮಸೀದಿ ಅಧ್ಯಕ್ಷ ಅಬ್ಬಾಸ್, ಕೊಡಿ ಮಸೀದಿ ಅಧ್ಯಕ್ಷ ಹಮಿದ್ ಕೊಡಿ, ಉಳ್ಳಾಲ ಪೇಟೆ ಮಸೀದಿ ಜತೆ ಕಾರ್ಯದರ್ಶಿ ಪೋಡಿಮೋನು, ಇಲ್ಯಾಸ್, ಸದಸ್ಯ ಅಝೀಝ್, ಶರಫತ್, ಮುಸ್ತಾಫ ಕೊಟ್ಟಾರ, ಅಬ್ದುಲ್ಲಾ, ಉಳ್ಳಾಲ ದರ್ಗಾದ ಖಜಾಂಜಿ ಇಲ್ಯಾಸ್, ಪೇಟೆ ಮಸೀದಿ ಖಾತಿಬ್ ಲತೀಫ್ ಮದನಿ, ನಾಸಿರ್ ಮುಸ್ಲಿಯಾರ್, ಸದರ್ ಶರೀಫ್ ಮದನಿ ಮುಂದಾದವರು ಉಪಸ್ಥಿತರಿದ್ದರು.
ರಹ್ಮಾನಿಯ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮೊಹಿಯುದ್ದೀನ್ ಹಸನ್ ಸ್ವಾಗತ ಭಾಷಣ ಮಾಡಿ ಕಾರ್ಯದರ್ಶಿ ಮುಸ್ತಾಫಾ ಅಬ್ದುಲ್ಲಾ ಪ್ರಸ್ಥಾಪನೆ ಮಾಡಿ ವಂದಿಸಿದರು.
ಶುಕ್ರವಾರ ಜುಮಾ ಖುತುಬಾ ಯೂಸುಫ್ ಮಿಸ್ಬಾಹಿ ಪಾರಾಯಣ ಮಾಡಿದರು.