ಉಳ್ಳಾಲ: ಪಾಣಕ್ಕಾಡ್ ಹೈದರ್ ಅಲಿ ಶಿಹಾಬ್ ತಂಙಳ್ ಅನುಸ್ಮರಣೆ

ಉಳ್ಳಾಲ: ಮದ್ರಸ ಶಿಕ್ಷಣ ಮಕ್ಕಳ ಅಭಿವೃದ್ಧಿಯ ಸಾಧನ. ಶಿಕ್ಷಣ ಬೆಳವಣಿಗೆಗೆ ಎಲ್ಲರೂ ಒತ್ತು ನೀಡಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಸಮಸ್ತ ಮುಫತ್ತಿಷ್ ಹನೀಫ್ ಮುಸ್ಲಿಯಾರ್ ಹೇಳಿದರು
ಅವರು ದೇರಳಕಟ್ಟೆ ರೇಂಜ್ ಜಂ ಇಯ್ಯತ್ತುಲ್ ಮುಅಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್ ಮೆಂಟ್ ಇದರ ಆಶ್ರಯದಲ್ಲಿ ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹಾ ಸಮ್ಮೇಳನ ಹಾಗೂ ಪಾಣಕ್ಕಾಡ್ ಹೈದರ್ ಅಲಿ ಶಿಹಾಬ್ ತಂಙಳ್ ಅನುಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೆಯ್ಯದ್ ಬಾತಿಷ್ ತಂಙಳ್ ಮಜ್ಲಿಸ್ ನ್ನೂರು ನೇತೃತ್ವ ವಹಿಸಿದ್ದರು.ಅಮೀರ್ ತಂಙಳ್ ದುಆ ನೆರವೇರಿಸಿದರು. ಎಸ್ ವೈ ಎಸ್ ಕೇಂದ್ರ ಕಾರ್ಯದರ್ಶಿ ಅಬ್ದುಲ್ ಸಮದ್ ಪೊಕೋಟೂರು ಮುಖ್ಯ ಪ್ರಭಾಷಣ ಮಾಡಿದರು.
ಇಬ್ರಾಹಿಂ ಕೊಣಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇರಳಕಟ್ಟೆ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಇಸ್ಮಾಯಿಲ್ ಹಾಜಿ ಕಿನ್ಯ, ಇಸ್ಹಾಕ್ ಫೈಝಿ ದೇರಳಕಟ್ಟೆ, ಇಬ್ರಾಹಿಂ ಬಾಖವಿ, ಏಷ್ಯನ್ ಬಾವಾ ಹಾಜಿ ,ಪುತ್ತು ಹಾಜಿ ಪನೀರ್, ಅಬೂಬಕ್ಕರ್ ಹಾಜಿ ದೇರಳಕಟ್ಟೆ,ಬಾವು ಮಂಗಳನಗರ, ಅಝೀಝ್ ಫೈಝಿ ಪಟ್ಟೋರಿ, ಅಬ್ಬಾಸ್ ಹಾಜಿ ಮಜಲ್ , ಎಸ್ ಹನೀಫ್ ಉಚ್ಚಿಲ, ಅಬ್ದುಲ್ಲಾ ಎಂ.ಬೆಳ್ಮಾ, ಅಬ್ದುಲ್ಲಾ ಮುಸ್ಲಿಯಾರ್ ಬಂಟ್ವಾಳ, ಯುಬಿ ಮುಹಮ್ಮದ್ ಹಾಜಿ ಉಚ್ಚಿಲ , ಸುಲೈಮಾನ್ ಹಾಜಿ ಅಜ್ಜಿನಡ್ಕ ಅಶ್ರಫ್ ಮಂಗಳನಗರ, ಅಬ್ದುಲ್ ರಹಿಮಾನ್ ದಾರಿಮಿ, ಫಾರೂಕ್ ದಾರಿಮಿ, ಅಬೂಬಕ್ಕರ್ ದಾರಿಮಿ , ಮುಸ್ತಫಾ ಫೈಝಿ ಎಲಿಯಾರ್ ರಫೀಕ್ ಎಮಾನಿ ,ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಲ್ ಅಝೀಝ್ ಮನ್ನಾನಿ ಕಿರಾಅತ್ ಪಠಿಸಿದರು.ದೇರಳಕಟ್ಟೆ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನೆರವೇರಿಸಿದರು.
ಅಬ್ದುಲ್ ರಹಿಮಾನ್ ದಾರಿಮಿ ಸ್ವಾಗತಿಸಿದರು.ಇರ್ಫಾನ್ ಮೌಲವಿ ಕಳಾಯಿ ನಿರೂಪಿಸಿದರು.ಮುಸ್ತಫಾ ಫೈಝಿ ಕಿನ್ಯ ವಂದಿಸಿದರು.







