ಉದ್ಯಮದ ಡಿಜಿಟಲ್ ರೂಪಾಂತರ ಕುರಿತು ಅಂತಾರಾಷ್ಟ್ರೀಯ ವರ್ಚುಯಲ್ ಸಮಾವೇಶ

ಮಂಗಳೂರು : ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ) ಮಲೇಷ್ಯಾದ ಲಿಮ್ಕೋಕ್ವಿಂಗ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಱಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಆಫ್ ಬ್ಯುಸಿನೆಸ್’ ಕುರಿತು ಅಂತಾರಾಷ್ಟ್ರೀಯ ವರ್ಚುಯಲ್ ಸಮಾವೇಶವವು ಶುಕ್ರವಾರ ನಗರದ ಬೊಂದೆೆಲ್‌ನಲ್ಲಿರುವ ಸಂಸ್ಥೆಯ ಕ್ಯಾಂಪಸ್‌ನಲ್ಲಿ ನಡೆಯಿತು.
ಎಸಿಐಇಎಸ್ ಇನ್ನೋವೇಶನ್ಸ್‌ನ ಸಹಸಂಸ್ಥಾಪಕ ಡಾ.ರಣಧೀರ್ ಪುಷ್ಪಾ ಸಮಾವೇಶ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಿಮ್ಕೋಕ್ವಿಂಗ್ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಮುಹಮ್ಮದ್ ರಜಾಲಿ ಬಿನ್ ಆಗಸ್ ಡಿಜಿಟಲ್ ತಂತ್ರಜ್ಞಾನವು ಎಲ್ಲವನ್ನೂ ಬಲಪಡಿಸಿದೆ. ಇದರ ತ್ವರಿತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಟ್ರಾವನ್‌ಕೋರ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ, ಸಂಸ್ಥೆಯ ಕರೆಸ್ಪಾಂಡೆಂಟ್ ಜೀವನ್ ದಾಸ್ ನಾರಾಯಣ್ ಡಿಜಿಟಲ್ ರೂಪಾಂತರದ ನೈತಿಕ ಆಯಾಮಗಳನ್ನು ಜನರು ಅರ್ಥಮಾಡಿಕೊಳ್ಳಬೇಕು, ಡಿಜಿಟಲ್ ಯುಟೋಪಿಯಾ, ಡಿಸ್ಟೋಪಿಯಾಗಳಂತಹ ಸಮಸ್ಯೆಗಳನ್ನು ಶೈಕ್ಷಣಿಕವಾಗಿ ಚರ್ಚಿಸಬೇಕು ಎಂದರು.
ಲಿಮ್ಕೋಕ್ವಿಂಗ್ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಡಾ. ಅಲ್ಮಹದಿ ಅಲ್ಹಾಜ್ ಸಲೇಹ್ ದಿಕ್ಷೂಚಿ ಭಾಷಣಗೈದರು. ನಂತರ ೫೬ ಸಂಶೋಧನಾ ಪ್ರಬಂಧಗಳನ್ನು ೧೭೫ ಪ್ರತಿನಿಧಿಗಳು ಮಂಡಿಸಿದರು.
ಸಂಸ್ಥೆಯ ಅಧ್ಯಕ್ಷ ಕುಡ್ಪಿಜಗದೀಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಪ್ರಬಂಧಗಳ ಸಿಡಿಯನ್ನು ಉಪಾಧ್ಯಕ್ಷ ಮಣೆಲ್ ಅಣ್ಣಪ್ಪ ನಾಯಕ್ ಬಿಡುಗಡೆಗೊಳಿಸಿದರು. ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ರೀಮಾ ಫ್ರಾಂಕ್ ವಂದಿಸಿದರು.