ಸಂಶಯದ ಮೇಲೆ ಯುವಕನ ಬಂಧನ
ಮಂಗಳೂರು : ನಗರದ ಶಿವನಗರ ಕೊರಗಜ್ಜನ ಗುಡಿ ಬಳಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಠಳಾಯಿಸುತ್ತಿದ್ದ ಬಾಗಲಕೋಟೆ ಜಿಲ್ಲೆಯ ಚಿಕ್ಕ ಡಂಡರಗಲ್ ಗ್ರಾಮದ ಹನುಮಂತ ಎನ್. ತಟ್ಟಿ (೩೫)ಎಂಬಾತನನ್ನು ಶನಿವಾರ ಮುಂಜಾವ ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಎಸ್ಸೈ ಅನಂತ ಮುರುಡೇಶ್ವರ್ ಶನಿವಾರ ಮುಂಜಾವ ೨:೩೦ಕ್ಕೆ ಸಿಬ್ಬಂದಿ ಪ್ರಕಾಶ್ ನಾಯ್ಕ್ ವಿ. ರೊಂದಿಗೆ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಹನುಮಂತ ಶೆಟ್ಟಿ ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ್ದ. ಪೊಲೀಸರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ಕಾರಣ ಕಾನೂನು ಕ್ರಮ ಜರಗಿಸಲಾಗಿದೆ.
Next Story