ಶಿವಮೊಗ್ಗ: 2 ಪ್ರತ್ಯೇಕ ಗಾಂಜಾ ಪ್ರಕರಣದಲ್ಲಿ 6 ಮಂದಿಯ ಬಂಧನ

ಶಿವಮೊಗ್ಗ( ಏ.03):ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಆರು ಜನರನ್ನು ಬಂಧಿಸಲಾಗಿದೆ.
ಜಂಬ್ಬಣ್ಣ ರೈಸ್ ಮಿಲ್ ಹತ್ತಿರ ಗಾಂಜಾ ಮಾರಾಟ ಮಾಡುತಿದ್ದ ಐದು ಜನರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬನ್ನೀಕೆರೆ ಗ್ರಾಮದ ಉಮೇಶ್ ನಾಯ್ಕ್ (48), ನವುಲೆಯ ನಿತಿನ್(23), ಬಾಪೂಜಿ ನಗರದ ರಾಹಿಲ್ ಖಾನ್ (23), ಹನುಮಂತನಗರ ನಿವಾಸಿಗಳಾದ ಶ್ರೇಯಸ್(25), ನಿತಿನ್ ಕುಮಾರ್(26) ಬಂಧಿತರು. ಅಂದಾಜು 70 ಸಾವಿರ ರೂ. ಮೌಲ್ಯದ 1 ಕೆಜಿ 100 ಗ್ರಾಂ ಒಣ ಗಾಂಜಾ, 3,670 ರೂ. ನಗದು ಮತ್ತು 1 ದ್ವಿ ಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಠಾಣೆ ಪಿಎಸ್‍ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಶುಕ್ರವಾರ ಸಂಜೆ ವ್ಯಕ್ತಿಯೊಬ್ಬನು ಭದ್ರಾವತಿ ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಟ್ ಪಟ್ ನಗರ ಕಡೆಯಿಂದ ಗಾಂಜಾ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಪಿಎಸ್‍ಐ ಮತ್ತು ಸಿಬ್ಬಂದಿ ತಂಡವು ಕಾರ್ಯಾಚರಣೆ ನಡೆಸಿ ಇಂದಿರಾನಗರದ ಮಹಮ್ಮದ್ ಅರ್ಷಾನ್(23) ಎಂಬಾತನನ್ನು ಬಂಧಿಸಿದದೆ. ಈತನಿಂದ ಅಂದಾಜು 8,000 ರೂ. ಮೌಲ್ಯದ 420 ಗ್ರಾಂ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.







