ರಾಜಸ್ತಾನ ವೈದ್ಯೆಯ ಆತ್ಮಹತ್ಯೆ ಪ್ರಕರಣ: ಖಂಡನೆ
ಉಡುಪಿ : ಮೃತ ರೋಗಿಯ ಸಂಬಂಧಿಕರು, ಪೊಲೀಸ್ ಅಧಿಕಾರಿ ಗಳು, ಸಮಾಜ ಘಾತುಕ ಶಕ್ತಿಗಳ ಮಾನಸಿಕ ದೌರ್ಜನ್ಯದಿಂದ ಮನನೊಂದು ರಾಜ ಸ್ಥಾನದ ಯುವ ವೈದ್ಯೆ ಡಾ.ಅರ್ಚನಾ ಶರ್ಮ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರು ವುದು ಇಡೀ ವೈದ್ಯಕೀಯ ರಂಗವನ್ನೇ ತಲ್ಲಣಗೊಳಿಸಿದೆ. ಇದನ್ನು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಖಂಡಿಸಿದೆ.
ವೈದ್ಯರ ಹಿತರಕ್ಷಣೆಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಅಗತ್ಯದ ಕಾನೂನು ಕ್ರಮಗಳನ್ನು ಜಾರಿಗೆ ತಂದರೂ ವೈದ್ಯರಿಗೆ ಯಾವುದೇ ರೀತಿಯ ರಕ್ಷಣೆ ಸಿಗುತ್ತಿಲ್ಲ. ವೈದ್ಯೆಯ ಆತ್ಮಹತ್ಯೆ ಪ್ರಕರಣದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ವೈದ್ಯೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ವೈದ್ಯರ ಮೇಲಿನ ಇಂತಹ ದೌರ್ಜನ್ಯಗಳು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಆಗ್ರಹಿಸಿದೆ.
Next Story





