ರಾಜ್ಯದಲ್ಲಿ ಧರ್ಮದ ಮುಖವಾಡದಲ್ಲಿ ಅಧರ್ಮ ಕುಣಿದು ಕುಪ್ಪಳಿಸುತ್ತಿದೆ: ದೇವನೂರ ಮಹಾದೇವ ಆಕ್ರೋಶ

ಮೈಸೂರು,ಎ.2: ರಾಜ್ಯದಲ್ಲಿ ಧಮದ ಮುಖಡವಾಡದಲ್ಲಿ ಅಧರ್ಮ ಕುಣಿದು ಕುಪ್ಪಳಿಸುತ್ತಿದೆ. ಕಾನೂನನ್ನು ಕೈಗೆತ್ತಿಕೊಂಡವರ ಮೇಲೆ ಕ್ರಮ ಕೈಗೊಳ್ಳಬೆಕಾದ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದು ಖ್ಯಾತ ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.
ನಗರದ ರಿಂಗ್ ರಸ್ತೆಯ ಬಳಿಯ ಶಾಂತಿ ನಗರ (ಮಹದೇವಪುರ ರಸ್ತೆ) ದ ಕರ್ನಾಟಕ ಮಟನ್ ಸ್ಟಾಲ್ ನಲ್ಲಿ ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಹಲಾಲ್ ಕಟ್ ಮಾಂಸ ಖರೀದಿ ಅಭಿಯಾನದಲ್ಲಿ ರವಿವಾರ ಭಾಗವಹಿಸಿ ಹಲಾಲ್ ಕಟ್ ಮಾಂಸ ಖರೀದಿ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಇದನ್ನೂ ಓದಿ... ಹಿಂದುತ್ವ ಸಂಘಟನೆಗಳ ಕರೆ ಬಹಿಷ್ಕರಿಸಿ ಮುಸ್ಲಿಮರ ಅಂಗಡಿಯಿಂದ ಮಾಂಸ ಖರೀದಿಸಿದ ದಲಿತರು, ರೈತರು ಮತ್ತು ಸಾಹಿತಿಗಳು
ಧರ್ಮದ ಮುಖಡವಾಡದಲ್ಲಿ ಅಧರ್ಮ ಕುಣಿದು ಕಪಪ್ಪಳಿಸುತ್ತಿದೆ. ಜನ ಸಮುದಾಯದ ವಿವೇಕ ಕಮ್ಮಿಯಾಗುತ್ತಿದೆ. ಅಧರ್ಮ ನಿರ್ಲಜ್ಜವಾಗಿ ಕುಪ್ಪಳಿಸುತ್ತಿದೆ. ಮಾರಮ್ಮನ ಜಾತ್ರೆಯಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ನಿಷಿದ್ಧ ಮಾಡುವ ಗುಂಪು, ಮತ್ತೊಂದೆಡೆ ಮಾಂಸ ತಿನ್ನದವರು ಮಾಂಸ ಕತ್ತರಿಸುವುದರ ಬಗ್ಗೆ ಮಾತನಾಡುತ್ತಿದ್ದಾರೆ.ಇದನ್ನೆಲ್ಲಾ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದಿಯಾ ಎನ್ನಿಸುತ್ತಿದೆ. ಇದೆ ಎನ್ನುವುದಾದರೆ ಸರ್ಕಾರ ನಾನು ನಿರ್ವಹಿಸಿ ಬೇಕಾದ ಕಾನೂನನ್ನು ನೀನು ಏಕೆ ಕೈಗೆತ್ತುಕೊಂಡೆ ಎಂದು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅದ್ಯಾವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಅರ್ಥದಲ್ಲಿ ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ದ್ವೇಷ ಹುಟ್ಟಿಸಿ ಜನ ಸಮುದಾಯ ಹೊಡೆದು ಓಟ್ ಬ್ಯಾಂಕ್ ರಾಜಕರಾಣವನ್ನು ಸರ್ಕಾರ ಮಾಡುತ್ತಿದೆ. ಇವರಿಗೆ ದ್ವೇಷವೇ ಎನರ್ಜಿ ಡ್ರಿಂಕ್ಸ್, ಅದಕ್ಕೆ ಸುಳ್ಳನ್ನು ಹಬ್ಬಿಸುತ್ತಾರೆ. ಅಧಿಕಾರಕ್ಕಾಗಿ ಯಾರಾದರನ್ನೂ ಎತ್ತಿಕಟ್ಟುತ್ತಾರೆ. ಅಧಿಕಾರಕ್ಕಾಗಿ ಇಷ್ಟೊಂದು ಅಮಾನವೀಯವಾಗಿ ಸರ್ಕಾರ ನಡೆದುಕೊಳ್ಳುತ್ತಿರುವುದು ದುರಂತ. ಹಾಗಾಗಿ ಸಕಲ ಹದಿನೆಂಟು ಜಾತಿಗಳಲ್ಲಿ ವಿವೇಕ, ವಿವೇಚನೆ ಇರುವವರು ಇದ್ದಾರೆ. ಅವರು ಮಾತನಾಡಬೇಕು, ಕ್ರಿಯಾಶೀಲರಾಗಬೇಕು ಎಂದು ಕರೆ ನೀಡಿದರು.
ನಮ್ಮ ಹಳ್ಳಿ ಕಡೆ ಒಂದು ಗಾದೆ ಇದೆ ಆಯ್ದುಕೊಂಡು ತಿನ್ನೋ ಕೋಳಿಗೆ ಕಾಲು ಮುರಿಬಾರದರು ಎಂದು ಆದರೆ ಇವತ್ತು ಇದೇ ಆಗುತ್ತಿದೆ. ನಾನು ಸುಮಾರು ದಿನ ದಿಂದ ಹಳೇ ಪೇಪರ್ ಕಾಲಿ ಬಾಟಲ್ ಕೊಳ್ಳುವವರಿಗೆ ಕಾಯುತ್ತಿದ್ದೇನೆ. ಯಾರೂ ಬರುತ್ತಿಲ್ಲ. ಕಲುಷಿತ ವಾತಾರವಣದಿಂದ ನಿಶ್ಯಬ್ದವಾಗಿದ್ದಾರೆ. ಇದಕ್ಕಾಗಿ ನಮ್ಮ ಸಮಾಜ ತಲೆ ತಗ್ಗಿಸಬೇಕಿದೆ ಎಂದು ಕುಟುಕಿದರು.
ಹಳೇಪೇಪರ್, ಹಾಲಿನ ಕವರ್ ಕೊಳ್ಳುತ್ತಿದ್ದವರು ಹೊಟ್ಟೆ ಪಾಡು ಮಾಡುತ್ತಿದ್ದರು ಎಂದು ನಾವು ತಿಳಿದುಕೊಂಡಿದ್ದೇವೆ. ಹಳೆ ಪೇಪರ್, ಹಾಲಿನ ಕವರ್ ಖಾಲಿ ಬಾಟಲ್, ಅವರ ಕೆಲಸದಿಂದ ಪುನರ್ ಬಳಕೆಯಾಗುತ್ತಿತ್ತು. ಪುನರ್ ಬಳಕೆಯಿಂದ ಕಾಡು ಉಳಿಯುತ್ತಿತ್ತು. ಪರಿಸರ ರಕ್ಷಣೆಯಾಗುತ್ತಿತ್ತು. ಜೊತೆಗೆ ಹಾಲಿನ ಕವಲರ್ ಪ್ಲಾಸ್ಟಿಕ್ ತ್ಯಾಜ್ಯ ಭೂಮಿಗೆ ಹಾಕುವುದನ್ನು ತಪ್ಪಿಸುತ್ತಿದ್ದರು. ಈಗ ಅವರ್ಯಾರು ಕಾಣುತ್ತಿಲ್ಲ, ಮಠಗಳಲ್ಲಿರುವ ಮರಿಗಳು ಈ ಕೆಲಸ ಮಾಡಲಿ. ಕನಿಷ್ಠ ದೇಶಸೇವೆಯಾದರೂ ಆಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ವಿರೋಧ ಪಕ್ಷಗಳು ಮಂಕಾಗಿ ಕುಳಿತಿವೆ. ಇದು ಮಿಷನರಿ ತರ ಇಂಗ್ ಹೊಡೆದರೆ ಇಂಗಾಗುತ್ತದೆ ಎಂದು ಒಂದೊಂದಾಗಿ ಹೊಡೆಯುತ್ತಿದ್ದಾರೆ. ಮೊದಲು ಹಿಜಾಬ್ ತಂದರು. ಆಗ ಮುಸ್ಲಿಮರು ಬಂದ್ ಮಾಡಿದರು. ಇವರ ಬಂದ್ ಯಾರ ವಿರುದ್ಧದ್ದೂ ಅಲ್ಲ, ಯಾರಿಗೆ ತೊಂದರೆ ಕೊಡುವವಂತದ್ದೂ ಆಗಿರಲಿಲ್ಲ. ಉಪವಾಸ ಸತ್ಯಾಗ್ರಹದ ರೀತಿ ಬಂದ್ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದರು. ನಮಗೆ ಆಗಿರುವ ನೋವನ್ನು ಅಭಿವ್ಯಕ್ತಪಡಿಸುತ್ತಿದ್ದೇವೆ ಎಂದರು. ಯಾರಿಗೂ ಬಲವಂತ ಮಾಡುತ್ತಿಲ್ಲ, ಬೀದಿಗೆ ಇಳಿಯುತ್ತಿಲ್ಲ. ಘೋಷಣೆ ಕೂಗುತ್ತಿಲ್ಲ. ಬಹಳ ನೊಂದಿದ್ದೇವೆ ಎಂದರು. ಇದರಿಂದ ನಿಮಗೇನು ಕಣ್ಣುರಿ ಎಂದು ಪ್ರಶ್ನಿಸಿದರು.
ಮಾಂಸ ತಿನ್ನದವರು ಹಂಗೆ ತಿನ್ನ ಬಾರದು ಇಂಗೆ ತಿನ್ನಬಾರದು, ಇಂಗೆ ಕಟ್ಟ ಮಾಡಬೇಕದು ಎಂದು ಹೇಳುತ್ತಿದ್ದಾರೆ. ಅವರು ಯಾರು ಅಪ್ಪಣೆ ಕೊಡಿಸಲು ಎಂದು ಪ್ರಶ್ನಿಸಿದರು.







