ಮನೆಯಲ್ಲಿರಿಸಿದ ಚಿನ್ನದ ಸರ ಕಳವು
ಕುಂದಾಪುರ : ಮನೆಯ ಕಾಪಾಟಿನಲ್ಲಿಟ್ಟಿದ್ದ ೨ ಲಕ್ಷ ರೂ. ಮೌಲ್ಯದ ೫೦ ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವ ಬಗ್ಗೆ ವರದಿಯಾಗಿದೆ.
ಯುಗಾದಿ ಹಬ್ಬಕ್ಕಾಗಿ ಪ್ರದೀಪ್ ಶೆಟ್ಟಿ ಪತ್ನಿ ಚಿನ್ನದ ಸರ ಹಾಕಿಕೊಳ್ಳಲು ಕಪಾಟಿನ ಲಾಕರ್ ಬೀಗ ತೆಗೆದು ನೋಡುವಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಇವರ ದೂರದ ಸಂಬಂಧಿ ರಾಘವೇಂದ್ರ ಎಂಬಾತನು ಆಗಾಗ ಮನೆಗೆ ಬರುತ್ತಿದ್ದು, ಈ ಚಿನ್ನದ ಸರವನ್ನು ಕಪಾಟಿನ ಲಾಕರ್‌ನ ಕೀ ಬಳಸಿ ಆತನೇ ಕಳವು ಮಾಡಿರುವ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





