ಮಂಗಳೂರಿನಲ್ಲಿ ಧಾರಾಕಾರ ಮಳೆ

ಮಂಗಳೂರು : ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಮತ್ತು ಬಿಸಿಲಿನ ಬೇಗೆಗೆ ಸಿಲುಕಿದ್ದ ಮಂಗಳೂರಿನಲ್ಲಿ ರವಿವಾರ ರಾತ್ರಿ ಧಾರಾಕಾರ ಮಳೆಯಾಗಿದೆ.
ರಾತ್ರಿ ಸುಮಾರು 8:30ಕ್ಕೆ ಸುರಿಯಲಾರಂಭಿಸಿದ ಮಳೆಯು ಸತತ ಒಂದು ಗಂಟೆಯ ಕಾಲ ಸುರಿಯಿತು.
ಗುಡುಗು, ಮಿಂಚು ಸಹಿತ ಸುರಿದ ಮಳೆ ನೀರು ಸ್ಮಾರ್ಟ್ ಸಿಟಿ ಯೋಜನೆಯ ಅಸಮರ್ಪಕ ಕಾಮಗಾರಿ, ಒಳಚರಂಡಿಯಲ್ಲಿ ಹೂಳು ತುಂಬಿದ ಕಾರಣ ರಸ್ತೆಯಲ್ಲಿ ಹರಿಯಿತು. ನಗರವಲ್ಲದೆ ಹೊರವಲಯದ ತೊಕ್ಕೊಟ್ಟು, ಉಳ್ಳಾಲ, ದೇರಳಕಟ್ಟೆ, ಕೊಣಾಜೆ, ತಲಪಾಡಿ, ಕೂಳೂರು ಸಹಿತ ಸುತ್ತಮುತ್ತಲಿನ ಹಲವೆಡೆ ಭಾರೀ ಮಳೆಯಾಗಿದೆ.












