3,074 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ: ಬಿಬಿಎಂಪಿ

ಬೆಂಗಳೂರು, ಎ.3: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮಾರ್ಚ್ 2022ರ ಅಂತ್ಯಕ್ಕೆ 3,074 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಣೆಯಾಗಿದೆ. ಮಹದೇವಪುರ ವಲಯದಲ್ಲಿ ಅತೀ ಹೆಚ್ಚು ತೆರಿಗೆ ವಸೂಲಿಯಾಗಿದ್ದು, 793.98 ಕೋಟಿ ರೂ. ಸಂಗ್ರಹವಾಗಿದೆ.
ಪೂರ್ವ ವಲಯದಲ್ಲಿ 584.31 ಕೋಟಿ ರೂ., ಪಶ್ಚಿಮ ವಲಯದಲ್ಲಿ 334.92 ಕೋಟಿ ರೂ., ದಕ್ಷಿಣ ವಲಯದಲ್ಲಿ 448.50 ಕೋಟಿ ರೂ., ಬೊಮ್ಮನಹಳ್ಳಿ ವಲಯದಲ್ಲಿ 328.51 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಆರ್.ಆರ್. ನಗರ ವಲಯದಲ್ಲಿ 202.47 ಕೋಟಿ ರೂ., ದಾಸರಹಳ್ಳಿ ವಲಯದಲ್ಲಿ 83.56 ಕೋಟಿ ರೂ., ಯಲಹಂಕ ವಲಯದಲ್ಲಿ 290.91 ಕೋಟಿ ರೂ. ತೆರಿಗೆ ಹಣ ಸಂಗ್ರಹವಾಗಿದೆ.
Next Story





