ಯೆನೆಪೋಯ ವಿವಿ : ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆ ಕಾರ್ಯಾಗಾರ ಉದ್ಘಾಟನೆ

ಕೊಣಾಜೆ: ಯೆನೆಪೋಯ ನರ್ಸಿಂಗ್ ಕಾಲೇಜು ಮಂಗಳೂರು, ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯ ಯುವರೆಡ್ ಕ್ರಾಸ್ ಮತ್ತು ಸಮುದಾಯ ಶುಶ್ರೂಷ ವಿಭಾಗವು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ ಇವರ ಸಹಭಾಗಿತ್ವದೊಂದಿಗೆ ಸ್ವಯಂ ಸೇವಕರಿಗೆ ಯುವ ರೆಡ್ ಕ್ರಾಸ್ ಮಾಹಿತಿ ಕಾರ್ಯಕ್ರಮ, ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ಕಾರ್ಯಾಗಾರದ ಉದ್ಘಾಟನೆ ಯೆನೆಪೋಯ ವಿಶ್ವವಿದ್ಯಾನಿಲಯ ಒಳಾಂಗಣ ವೇದಿಕೆಯಲ್ಲಿ ನಡೆಯಿತು.
ಭಾರತೀಯ ರೆಡ್ ಕ್ರಾಸ್ ದ.ಕ ಇದರ ಕಾರ್ಯದರ್ಶಿ ಕುಸುಮಾಧರ್ ಬಿ.ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಯುವ ರೆಡ್ ಕ್ರಾಸ್ ಸ್ವಯಂ ಸೇವಕರ ಸೇವೆಗಳ ಕುರಿತಾಗಿ ಮಾತನಾಡಿ ಶುಶ್ರೂಷಕರ ಪಾತ್ರ ಸಮಾಜಸೇವೆಯಲ್ಲಿ ಮಹತ್ತರವಾಗಿದೆ ಎಂದರು.
ಪಬ್ಲಿಕ್ ಹೆಲ್ತ್ ವಿಭಾಗದ ಮುಖ್ಯಸ್ಥರಾದ ಡಾ. ಇಬ್ರಾಹಿಂ ನಾಗನೂರು ಇವರು ರೆಡ್ ಕ್ರಾಸ್ ಸಂಸ್ಥೆಯ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಯೆನೆಪೋಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ. ಲೀನಾ ಕೆ.ಸಿ ಇವರು ಅಧ್ಯಕ್ಷೀಯ ಭಾಷಣದಲ್ಲಿ ರೆಡ್ ಕ್ರಾಸ್ ಹಾಗೂ ಶುಶ್ರೂಷಕರ ಸೇವೆಗಳ ಸಾಮ್ಯತೆ ಬಗ್ಗೆ ವಿವರಿಸಿ ಹಾಗೂ ವಿಧ್ಯಾರ್ಥಿಗಳು ತಮಗೆ ದೊರೆತಿರುವ ರೆಡ್ ಕ್ರಾಸ್ ಕಾರ್ಯಕ್ರಮಗಳ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಿ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಭರತ್ ಕುಮಾರ್ ಅಗ್ನಿ ಶಾಮಕದಳ ಅಧಿಕಾರಿ ಮಂಗಳೂರು ಇವರ ತಂಡದ ಸಹಯೋಗದೊಂದಿಗೆ ಅಗ್ನಿ ದುರಂತ ಸುರಕ್ಷತೆಯ ಬಗ್ಗೆ ಪ್ರಾತ್ಯಕ್ಷಿಕವನ್ನು ಮಾಡಿ ತೋರಿಸಿದರು. ಬಳಿಕ ಪ್ರಥಮ ಚಿಕಿತ್ಸೆ ಹಗೂ ವಿಪತ್ತು ನಿರ್ವಹಣೆಯ ವಿಷಯವನ್ನು ಸಚೇತ್ ಸುವರ್ಣ, ಅಂಕಿತ್, ಅಶ್ವಿನ್ ಹಾಗೂ ರಮೇಶ್ ಸಹ ಕಮಾಂಡೆಂಟ್ ಗೃಹ ರಕ್ಷಕ ದಳ ಇವರ ಸಹಯೋಗದೊಂದಿಗೆ ನಡೆಸಲಾಯಿತು.
ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ನೋಡಲ್ ಅಧಿಕಾರಿ ನಿತ್ಯಶ್ರೀ ಬಿ.ವಿ ಸ್ವಾಗತಿಸಿ, ಜ್ಯೋತಿ ವಂದಿಸಿದರು.