ಗುಂಡ್ಲುಪೇಟೆ: ಹೋಳಿ ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕ ನೀರುಪಾಲು

ವೈಶಾಲ್ - ಮೃತ ಯುವಕ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ವೈಶಾಲ್ (17) ಎಂಬ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಯುಗಾದಿ ಹೊಸತುಡುಕು ಸಂಭ್ರಮದಲ್ಲಿದ್ದ ವೈಶಾಲ್ ಮತ್ತು ಸ್ನೇಹಿತರು ಹೋಳಿಹಬ್ಬ ಆಚರಿಸಿ ಬಣ್ಣವನ್ನ ತೊಳೆಯಲು ಕೆರೆಯಲ್ಲಿ ಇಳಿದ ಸಂಧರ್ಭದಲ್ಲಿ ಅಚಾನಕ್ಕಾಗಿ ಆಳದ ಗುಂಡಿಗೆ ಜಾರಿದ ವೈಶಾಲ್ ಈಜು ಬಾರದ ಹಿನ್ನೆಲೆ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.
ಇನ್ನುಳಿದಂತ ಸ್ನೇಹಿತರು ಈಜಿ ದಡ ಸೇರಿದ ಬಳಿಕ ವಿಚಾರವನ್ನ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಮೃತಪಟ್ಟ ವೈಶಾಲ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
Next Story