ಧರ್ಮಗಳ ಸಂಘರ್ಷ ಕೈಗಾರಿಕೋದ್ಯಮಕ್ಕೆ ಪರಿಣಾಮ ಬೀರುವುದಿಲ್ಲ : ಸಚಿವ ಮುರುಗೇಶ್ ನಿರಾಣಿ

ಉಡುಪಿ : ರಾಜ್ಯದಲ್ಲಿ ನಡೆಯುತ್ತಿರುವ ಧರ್ಮಗಳ ನಡುವಿನ ಸಂಘರ್ಷಗಳು ಕೈಗಾರಿಕೋದ್ಯಮದ ಮೇಲೆ ಯಾವುದೇ ರೀತಿಯ ಪರಿಣಾಮ ಆಗುವುದಿಲ್ಲ. ಕೈಗಾರಿಕೆಗಳಿಗೆ ಇಲ್ಲಿರುವ ಹವಮಾನ, ಕೈಗಾರಿಕಾ ನೀತಿ ಹಾಗೂ ಸರಕಾರದ ಸ್ಪಂದನೆ ಮುಖ್ಯವಾಗಿರುತ್ತದೆ ಎಂದು ಎಂದು ರಾಜ್ಯ ಬೃಹತ್ ಹಾಗೂ ಮಾಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಝಾನ್, ಹಲಾಲ್ ಕುರಿತು ಕೆಲವರು ಮಾತ್ರ ಚರ್ಚೆ ಮಾಡುತ್ತಿದ್ದಾರೆ. ನಮ್ಮಂತಹ ಉದ್ದಿಮೆದಾರರು ಆ ಕಡೆ ನೋಡಲು ಹೋಗುವುದಿಲ್ಲ. ನಮ್ಮದು ಬೇರೆಯೇ ಲೋಕ ಇದೆ. ಇದರ ಬಗ್ಗೆ ನಾನು ಮಾತನಾಡಲ್ಲ. ಪಕ್ಷದ ವಕ್ತಾರರು ಅದಕ್ಕೆ ಉತ್ತರ ಕೊಡುತ್ತಾರೆ. ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರಾಯ ಹೇಳಿ ದರೆ ಗೊಂದಲ ಸೃಷ್ಠಿಯಾಗುತ್ತಿದೆ ಎಂದರು.
ನವೆಂಬರ್ ತಿಂಗಳಲ್ಲಿ ನಡೆಯುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಮೊದಲು ರಾಜ್ಯದಲ್ಲಿ 50 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಪ್ರತಿ ಜಿಲ್ಲೆಗೆ ಕನಿಷ್ಠ ಒಂದು ಸಾವಿರ ಎಕರೆ, ಬೆಂಗಳೂರು ಸುತ್ತಮುತ್ತ 20ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಮಾಡ ಲಾಗುವುದು. ಭೂಮಿ ಸಿದ್ಧವಿದ್ದರೆ ಹೊಸ ಯೋಜನೆ ಬಂದರೆ ಅವಕಾಶ ಕಲ್ಪಿಸಲು ಅನುಕೂಲವಾಗುತ್ತದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಫರ್ನಿಚರ್ ಪಾರ್ಕ್ ಹಾಗೂ ಮಹಿಳೆಯರಿಗೆ ಉದ್ಯಮ ಪಾರ್ಕ್ ಮಾಡುವ ಬಗ್ಗೆ ಗಮನ ಹರಿಸಲಾಗುವುದು. ನಮ್ಮ ಕೇಂದ್ರ ಮುಖಂಡರು ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಪಡೆಯುವ ಗುರಿ ನೀಡಿದ್ದಾರೆ. ನಿಶ್ಛಿತವಾಗಿ ನಾವು 130ಕ್ಕೂ ಅಧಿಕ ಸ್ಥಾನವನ್ನು ಗೆಲ್ಲಲಿದ್ದೇವೆ. 2023ರಲ್ಲಿ ಬಿಜೆಪಿ ಪಕ್ಷವೇ ಸರಕಾರ ನಡೆಸುತ್ತದೆ ಎಂದು ಅವರು ತಿಳಿಸಿದರು.
ವಿದ್ಯುತ್ ದರ ಏರಿಕೆ ತಾತ್ಕಾಲಿಕ
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಿರುವುದು ತಾತ್ಕಾಲಿಕವಾಗಿದೆ. ಮುಂದೆ ಕಲ್ಲಿದ್ದಲು ಬೆಲೆ ಇಳಿದಾಗ ವಿದ್ಯುತ್ ದರ ಕೂಡ ಕಡಿಮೆ ಆಗುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಇಂದು ಕದ್ದಲಿಗೆ ಬಹಳಷ್ಟು ದರ ಹೆಚ್ಚಳವಾಗಿದೆ. ಕಲ್ಲಿದ್ದಲು ವಿದ್ಯುತ್ ಸ್ಥಾವರ ಗಳಲ್ಲಿ ನಾವು ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವು ದರಿಂದ ವಿದ್ಯುತ್ ದರ ಕೂಡ ಜಾಸ್ತಿಯಾಗಿದೆ. ಮುಂದೆ ಕಲ್ಲಿದಲು ಬೆಲೆ ಕಡಿಮೆಯಾದಾಗ ವಿದ್ಯುತ್ ಬೆಲೆ ಕೂಡ ಕಡಿಮೆ ಆಗುತ್ತದೆ ಎಂದರು.