ಯುವಕ ನಾಪತ್ತೆ

ಉಡುಪಿ : ಮಾ.22ರಂದು ಮಣಿಪಾಲ ಆಸ್ಪತ್ರೆಗೆ ರಕ್ತ ಪರೀಕ್ಷೆಗೆಂದು ತೆರಳಿದ ಕಾಪು ತಾಲೂಕು ಮಲ್ಲಾರು ಗ್ರಾಮದ ಕೊಂಬುಗುಡ್ಡೆ ನಿವಾಸಿ ಪವಾಜ್ ಅಹಮ್ಮದ್ (37) ಎಂಬವರು ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
೫ ಅಡಿ ೬ ಇಂಚು ಎತ್ತರ, ಬಿಳಿ ಮೈಬಣ್ಣ, ದುಂಡನೆಯ ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್, ಉರ್ದು, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: ೦೮೨೦-೨೫೫೧೦೩೩, ಮೊ.ನಂ: ೯೪೮೦೮೦೫೪೪೯, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಉಡುಪಿ ದೂ.ಸಂಖ್ಯೆ: ೦೮೨೦-೨೫೨೦೩೩೩, ಮೊ.ನಂ: ೯೪೮೦೮೦೫೪೩೧ ಅನ್ನು ಸಂಪರ್ಕಿಸುವಂತೆ ಕಾಪು ಪೋಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story