ಐವರು ಸಾಧಕರಿಗೆ ಇಂದು ಡಾ.ಬಾಬು ಜಗಜೀವನರಾಂ ಪ್ರಶಸ್ತಿ ಪ್ರದಾನ
ಬೆಂಗಳೂರು, ಎ.4: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 115ನೆ ಜಯಂತಿಯನ್ನು ಎ.5ರಂದು ಆಚರಿಸಲಾಗುತ್ತಿದ್ದು, ಇದೇ ದಿನದಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಐವರು ಸಾಧಕರಿಗೆ ಡಾ.ಬಾಬು ಜಗಜೀವನ್ ರಾಂ ಅವರ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ದಾನಪ್ಪ ಸಿ. ನಿಲೋಗಲ್- ದಲಿತ ಸಾಹಿತಿ, ಮುನಿಸ್ವಾಮಿ- ಕಿನ್ನರಿ ವಾದಕ, ಆರ್.ಎಂ.ಕಾಂತರಾಜು- ಸಮಾಜ ಸೇವೆ, ವೀರಪ್ಪ ಬಿ. ಸವಣೂರು- ಶೈಕ್ಷಣಿಕ ಚಿಂತಕ, ಎನ್.ಡಿ.ವೆಂಕಮ್ಮ- ಮಹಿಳಾ ಸಾಹಿತಿ, ಶಿಕ್ಷಣ ಪ್ರೇಮಿ ಆಗಿರುವ ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಸಾಧಕರಿಗೆ ಪ್ರಶಸ್ತಿ ಜತೆಗೆ ಶಾಲು, ಗಂಧದ ಹಾರ, ಫಲಪುಷ್ಪ, 20 ಗ್ರಾಂ ಚಿನ್ನದ ಪದಕ, 5 ಲಕ್ಷ ರೂಪಾಯಿ(ಚೆಕ್ ಮೂಲಕ) ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story





