ಬಂಟ್ವಾಳ ದಾರುನ್ನಜಾತ್ ಕಾಲೇಜಿಗೆ ಸಮಸ್ತದ ಫಾಳಿಲ ಮಾನ್ಯತೆ
ಬಂಟ್ವಾಳ, ಎ.೫: ದಾರುನ್ನಜಾತ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಳೆದ ಐದು ವರ್ಷಗಳಿಂದ ಕೆಳಗಿನ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನಜಾತ್ ವುಮೆನ್ಸ್ ಶರೀಅತ್ ಕಾಲೇಜಿಗೆ ಸಮಸ್ತದ ಫಾಳಿಲಾ ಮಾನ್ಯತೆ ಲಭಿಸಿದೆ.
ಆಡಳಿತ ಸಮಿತಿಯ ಅಪೇಕ್ಷೆಯಂತೆ ಅನ್ವೇಷಣೆಯ ಬಳಿಕ ಅಗತ್ಯವಾದ ಮೂಲಸೌಕರ್ಯಗಳ ಲಭ್ಯತೆಯ ಆಧಾರದಲ್ಲಿ ಮಾಡಲಾದ ಶಿಫಾರಸ್ಸಿನ ಮೇರೆಗೆ ಈ ಮಾನ್ಯತೆ ನೀಡಲಾಗಿದೆ.
ಎಸೆಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಧಾರ್ಮಿಕ ಶಿಕ್ಷಣದೊಂದಿಗೆ ಭೌತಿಕ ಶಿಕ್ಷಣ ನೀಡುವ ಸನ್ನಿವೇಶದ ನಿರ್ಮಾಣ, ಧಾರ್ಮಿಕ ಬಿರುದು ಮತ್ತು ಪಿಯುಸಿ ಜೊತೆಯಾಗಿ ಪಡೆದುಕೊಳ್ಳಲು ಸಹಾಯಕವಾಗುವ ರೀತಿಯಲ್ಲಿ ವ್ಯವಸ್ಥಿತಗೊಳಿಸಲಾದ ಸರಳವಾದ ಪಠ್ಯಕ್ರಮ, ಪಿಯುಸಿಯ ನಂತರ ಡಿಗ್ರಿ ಬಯಸುವ ವಿದ್ಯಾರ್ಥಿನಿಯರಿಗೆ ಹೆಚ್ಚುವರಿ ಮೂರು ವರ್ಷದ ಫಾಳಿಲಾ ಶರಿಯತ್ ಕೋರ್ಸ್ ಸಮಸ್ತದ ಮಹಿಳಾ ಕಾಲೇಜು ಸಿಲೆಬಸ್‌ನ ವಿಶೇಷತೆಯಾಗಿದೆ ಎಂದು ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ತಿಳಿಸಿದ್ದಾರೆ.
Next Story





