ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಸ್ನಾತಕೋತ್ತರ ಕೋರ್ಸ್ ಉದ್ಘಾಟನೆ

ಮಂಗಳೂರು, ಎ.೫: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ೨೪ನೇ ಬ್ಯಾಚ್ ಸ್ನಾತಕೋತ್ತರ ಕೋರ್ಸ್‌ನ್ನು ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಭಗವಾನ್ ಬುದ್ದ ಹೋಮಿಯೋಪಥಿ ಮೆಡಿಕಲ್ ಕಾಲೇಜ್‌ನ ಪ್ರಾಂಶುಪಾಲ ಸೆಬಾಸ್ಟಿಯನ್ ಪ್ರಭಾಕರ್, ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ. ರೋಶನ್ ಕ್ರಾಸ್ತಾ, ಉಪ ಆಡಳಿತಾಧಿಕಾರಿ ವಂ.ರೋಹನ್ ಡಾಯಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಇ.ಎಸ್.ಜೆ. ಪ್ರಭುಕಿರಣ್, ಉಪ ಪ್ರಾಂಶುಪಾಲ ಡಾ.ವಿಲ್ಮಾ ಮೀರಾ ಡಿಸೋಜ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಯು.ಜಿ. ಹಾಗೂ ಪಿ.ಜಿ. ಕೋರ್ಸ್ ಸಲಹೆಗಾರ ಡಾ. ಎಮ್.ಕೆ.ಕಾಮತ್, ಪಿ.ಜಿ. ಶೈಕ್ಷಣಿಕ ಉಸ್ತುವಾರಿ ಡಾ.ಜ್ಯೋಶ್ನಾ ಶಿವಪ್ರಸಾದ್ ಉಪಸ್ಥಿತರಿದ್ದರು.
ಡಾ ದಿಶಾ ರಾವ್ ಮತ್ತು ಡಾ.ಅಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.