ವಿದ್ಯುತ್ ದರ ಏರಿಕೆ: ಸಿಐಟಿಯು ಖಂಡನೆ
ಉಡುಪಿ : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಸರಕಾರದ ಒಪ್ಪಿಗೆ ಮೇರೆಗೆ ಪ್ರತಿ ಯುನಿಟ್‌ಗೆ ಸರಾಸರಿ ೩೫ ಪೈಸೆ ಮತ್ತು ವಿದ್ಯುತ್ ನಿಗದಿತ ಶುಲ್ಕ ಹೆಚ್ಚಳ ಮಾಡಿರುವುದನ್ನು ಸಿಐಟಿಯು ಉಡುಪಿ ಜಿಲ್ಲಾ ಖಂಡಿಸಿದೆ.
ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣದ ಪ್ರಕ್ರೀಯೆಗಳ ಭಾಗವಾಗಿ ದರ ಏರಿಕೆ ಮಾಡಲಾಗುತ್ತಿದೆ. ತೈಲ ಬೆಲೆ, ಅಡುಗೆ ಅನಿಲ, ಔಷಧಿಗಳ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿರುವಾಗ ನೆರವಿಗೆ ಬರಬೇಕಾದ ಸರಕಾರದ ಇಂಧನ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿರುವು ದನ್ನು ಸಿಐಟಿಯು ವಿರೋಧಿಸುತ್ತದೆ.
ಬಿಜೆಪಿ ನೇತೃತ್ವದ ಸರಕಾರವು ಬೆಲೆ ಏರಿಕೆ ತಡೆಗಟ್ಟಲು ಯಾವುದೇ ಪರ್ಯಾಯ ಕ್ರಮ ವಹಿಸದಿರುವುದು ಬಿಜೆಪಿಯ ಜನವಿರೋಧಿ ನೀತಿಗೆ ಸಾಕ್ಷಿ ಯಾಗಿದೆ. ಸರಕಾರ ಕೂಡಲೇ ಬೆಲೆ ಏರಿಕೆ ತಡೆಗಟ್ಟಲು ಕ್ರಮವಹಿಸಿ ಜನತೆ ಯನ್ನು ರಕ್ಷಿಸಲು ಮುಂದಾಗಬೇಕೆಂದು ಸಿಐಟಿಯು ಅಧ್ಯಕ್ಷ ಕೆ.ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Next Story