ಶ್ರಮಿಕರ ಬದುಕನ್ನು ಬರ್ಬರಗೊಳಿಸುತ್ತಿರುವ ಕೋಮು ಕ್ರಿಮಿಗಳನ್ನು ಸರಕಾರ ನಿಯಂತ್ರಿಸಲಿ: ಹೆಚ್.ಸಿ ಮಹದೇವಪ್ಪ

ಬೆಂಗಳೂರು, ಎ.5: ರಾಜ್ಯ ಸರಕಾರ ವಿಪರೀತ ಅರಾಜಕತೆಯಿಂದ ವರ್ತಿಸುತ್ತಿದ್ದರೂ ಅವರಿಗೆ ಚಾಟಿ ಬೀಸದೆ ನ್ಯಾಯಂಗವೂ ಸುಮ್ಮನೆ ಇರುವುದು ಸಮಾಜವನ್ನು ಬಹಳ ಬೇಗನೇ ನಾಗರಿಕ ಯುದ್ಧಗಳ ಕಡೆಗೆ ಕೊಂಡೊಯ್ಯುವಂತಹ ಆತಂಕವನ್ನು ಸೃಷ್ಟಿ ಮಾಡುತ್ತಿದೆ ಎಂದು ಟ್ವೀಟ್ ಮೂಲಕ ಮಾಜಿ ಮಂತ್ರಿ ಡಾ.ಹೆಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ಈಗೀಗ ಪ್ರತಿ ದಿನವೂ ಸಮಾಜದ ಒಳಗೆ ಧರ್ಮದ ಹೆಸರಿನಲ್ಲಿ ಗಲಭೆ ಎಬ್ಬಿಸುತ್ತಿರುವ ಪುಂಡ ಪೋಕರಿಗಳ ಹಾವಳಿ ಭೀಕರವಾಗಿ ಹೆಚ್ಚಾಗುತ್ತಿದೆ. ಇವುಗಳನ್ನು ನಿಯಂತ್ರಿಸಬೇಕಿದ್ದ ಸರಕಾರವೇ ಇವರ ಬೆನ್ನ ಹಿಂದೆ ನಿಂತು ಈ ಭೀಕರತೆಯನ್ನು ಪೋಷಣೆ ಮಾಡುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ ಎಂದಿದ್ದಾರೆ.
ಚುನಾವಣೆಯ ಕಾರಣಕ್ಕಾಗಿಯೇ ಸಮಾಜದಲ್ಲಿ ಪ್ರತಿದಿನವೂ ಅಶಾಂತಿಯನ್ನು ಉಂಟು ಮಾಡಲಾಗುತ್ತಿದ್ದು ಈಗಷ್ಟೇ ಸಹಜ ಜೀವನಕ್ಕೆ ಮರಳಿರುವ ಜನರಲ್ಲಿ ಮತ್ತೆ ಆತಂಕದ ಛಾಯೆ ಆವರಿಸಿದೆ. ಜನ ಸಾಮಾನ್ಯರ ಮೂಕ ಅಳುವಿನಲ್ಲಿ, ಎಲ್ಲವನ್ನೂ ಧ್ವಂಸ ಮಾಡುವ ಶಕ್ತಿ ಇದೆ ಎಂಬ ಸಂಗತಿಯನ್ನು ಮರೆಯದಿರೋಣ ಎಂದು ಎಚ್ಚರಿಸಿದ್ದಾರೆ.
ಈ ದೇಶದ ಮೂಲ ನಿವಾಸಿಗಳೇನಾದರೂ ಅಶಾಂತಿಯ ಮತ್ತು ದ್ವೇಷದ ಮಾರ್ಗ ಹಿಡಿದರೆ ಈಗ ಕಪಿಚೇμÉ್ಟ ಮಾಡುತ್ತಿರುವ ಜನರು ತಮ್ಮ ವಿನಾಶಕ್ಕೆ ತಾವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಒಂದೊಳ್ಳೆ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ, ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ಇರುವಾಗಲೂ ತಿಂದು ಕೊಬ್ಬು ಜಾಸ್ತಿಯಾಗಿ ದುರಹಂಕಾರದಿಂದ ವರ್ತಿಸುವ ಧಾರ್ಮಿಕ ಭಯೋತ್ಪಾದಕರಿಗೆ ಇಲ್ಲಿ ಶಾಂತಿಯುತವಾಗಿ ಬದುಕಲು ಇಷ್ಟವಿಲ್ಲದೇ ಹೋದರೆ ಈ ದೇಶ ಬಿಟ್ಟು ತೊಲಗಲಿ ಎಂದಿದ್ದಾರೆ.
ಶ್ರಮಿಕರ ಬದುಕನ್ನು ಬರ್ಬರಗೊಳಿಸುತ್ತಿರುವ ಈ ಕೋಮು ಕ್ರಿಮಿಗಳನ್ನು ಸರಕಾರ ನಿಯಂತ್ರಿಸಲಿ, ಇಲ್ಲದೇ ಹೋದರೆ ಜನಸಾಮಾನ್ಯರೇ ಅವರನ್ನು ನಿಯಂತ್ರಿಸುತ್ತಾರೆ. ಅಂತಹ ಕೆಟ್ಟ ಸನ್ನಿವೇಶ ಬಾರದಿರಲಿ ಎಂದು ಮತ್ತೊಮ್ಮೆ ಸರಕಾರವನ್ನು ಎಚ್ಚರಿಸುತ್ತೇನೆ ಎಂದಿದ್ದಾರೆ.
ಶ್ರಮಿಕರ ಬದುಕನ್ನು disturb ಮಾಡುತ್ತಿರುವ ಈ ಕೋಮು ಕ್ರಿಮಿ ಸೋಂಬೇರಿಗಳನ್ನು ಸರ್ಕಾರ ಕೂಡಲೇ ನಿಯಂತ್ರಿಸಲಿ, ಇಲ್ಲದೇ ಹೋದರೆ ಜನ ಸಾಮಾನ್ಯರೇ ಅವರನ್ನು ನಿಯಂತ್ರಿಸುತ್ತಾರೆ.
— Dr H.C.Mahadevappa (@CMahadevappa) April 5, 2022
ಅಂತಹ ಕೆಟ್ಟ ಸನ್ನಿವೇಶ ಬಾರದಿರಲಿ ಎಂದು ಮತ್ತೊಮ್ಮೆ ಸರ್ಕಾರವನ್ನು ಎಚ್ಚರಿಸುತ್ತೇನೆ
5/5







