ಟೆಂಪೋ ಢಿಕ್ಕಿ: ಪಾದಚಾರಿ ಮೃತ್ಯು
ಉಡುಪಿ : ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬನ್ನಂಜೆ- ಬ್ರಹ್ಮಗಿರಿ ರಸ್ತೆಯ ಕೀರ್ತಿ ಸಾಲಿಟೇರ ಅಪಾರ್ಟ್‌ಮೆಂಟ್ ಸಮೀಪ ಎ.೪ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಸ್ಟೀವನ್ ಲಸ್ರಾದೋ ಎಂದು ಗುರುತಿಸಲಾಗಿದೆ. ಇವರು ಬನ್ನಂಜೆ ಕಡೆಯಿಂದ ಬ್ರಹ್ಮಗಿರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬ್ರಹ್ಮಗಿರಿ ಜಂಕ್ಷನ್ ಕಡೆಯಿಂದ ಬನ್ನಂಜೆ ಕಡೆಗೆ ಹೋಗುತ್ತಿದ್ದ ಗೂಡ್ಸ್ ಟೆಂಪೋ ಢಿಕ್ಕಿ ಹೊಡೆದು, ಅವರ ಎದೆಯ ಮೇಲೆ ಹರಿದು ಹೋಯಿತು. ಇದರಿಂದ ಗಂಭೀರ ವಾಗಿ ಗಾಯಗೊಂಡ ಅವರು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಅಪಘಾತ ನಡೆಸಿದ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





