Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೋವಿಡ್‌ ಸಾವಿನ ಸಂಖ್ಯೆಯ ಕುರಿತು ಭಾರತ...

ಕೋವಿಡ್‌ ಸಾವಿನ ಸಂಖ್ಯೆಯ ಕುರಿತು ಭಾರತ ಸರ್ಕಾರ ನೀಡಿದ ದಾಖಲೆಗಳನ್ನು ನಿರಾಕರಿಸಿದ ವಿಶ್ವ ಆರೋಗ್ಯ ಸಂಸ್ಥೆ: ವರದಿ

ವಾರ್ತಾಭಾರತಿವಾರ್ತಾಭಾರತಿ5 April 2022 9:31 PM IST
share
ಕೋವಿಡ್‌ ಸಾವಿನ ಸಂಖ್ಯೆಯ ಕುರಿತು ಭಾರತ ಸರ್ಕಾರ ನೀಡಿದ ದಾಖಲೆಗಳನ್ನು ನಿರಾಕರಿಸಿದ ವಿಶ್ವ ಆರೋಗ್ಯ ಸಂಸ್ಥೆ: ವರದಿ

ಹೊಸದಿಲ್ಲಿ: ಕೋವಿಡ್‌ ಸಾವಿನ ಕುರಿತು ಸರ್ಕಾರ ನೀಡಿದ ಅಧಿಕೃತ ದಾಖಲೆಗಿಂತ ಗಣನೀಯ ಪ್ರಮಾಣದಲ್ಲಿ ʼಹೆಚ್ಚುವರಿ ಸಾವುʼ ಸಂಭವಿಸಿದೆ ಎಂದು ಸರ್ಕಾರಿಯೇತರ ಸಂಶೋಧಕರು ಮತ್ತು ಸಂಸ್ಥೆಗಳು ನಡೆಸಿದ ವರದಿಯನ್ನು ತಳ್ಳಿ ಹಾಕಲು ಸರ್ಕಾರವು ಎಷ್ಟೇ ಪ್ರಯತ್ನ ಪಟ್ಟರೂ ಸಂಶೋಧಕರ ವಾದವನ್ನು ಪುಷ್ಟೀಕರಿಸುವ ರೀತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನೂತನ ವರದಿ ಇದೆ. ಕೋವಿಡ್-19‌ ಬಗ್ಗೆ ಭಾರತ ಸರ್ಕಾರ ನೀಡಿದ ಅಧಿಕೃತ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ನಿರಾಕರಿಸಿದೆ ಎಂದು thewire.science ವರದಿ ಮಾಡಿದೆ.

ಇನ್ನೇನು ಬಿಡುಗಡೆಯಾಗಲಿರುವ WHO ವರದಿಯು, ಭಾರತ ಸರ್ಕಾರವು ಅಧಿಕೃತವಾಗಿ ನೀಡಿರುವ ಕೋವಿಡ್‌ ಸಾವುಗಳಿಗಿಂತ ಕನಿಷ್ಟ ನಾಲ್ಕು ಪಟ್ಟು ಹೆಚ್ಚು ಸಾವು ಸಂಭವಿಸಿದೆ ಎಂದು ಅಂದಾಜಿಸಿದೆ.  ಈ ಹಿಂದೆಯೇ ಹಲವು ಸಂಶೋಧಕರು ಹಾಗೂ ಸಂಸ್ಥೆಗಳು ಭಾರತದಲ್ಲಿ ಸರ್ಕಾರವು ಅಧಿಕೃತವಾಗಿ ನೀಡಿರುವುದಕ್ಕಿಂತ ಹಲವು ಪಟ್ಟು ಹೆಚ್ಚು ಕೋವಿಡ್‌ ಸಾವುಗಳು ಸಂಭವಿಸಿದೆಯೆಂದು ಕೆಲವು ಮಾನದಂಡಗಳ ಮೇರೆಗೆ ಊಹಿಸಿತ್ತು. ಅದಾಗ್ಯೂ, ಸರ್ಕಾರವು ಈ ವರದಿಗಳನ್ನು ತಳ್ಳಿ ಹಾಕಿತ್ತು. ಮಾನ್ಯವಲ್ಲದ ಮಾದರಿಯಲ್ಲಿ ಈ ಊಹೆಗಳನ್ನು ಮಾಡಲಾಗಿದೆ ಎಂದು ಸರ್ಕಾರ ಆ ವರದಿಗಳನ್ನು ನಿರಾಕರಿಸಿತ್ತು.

ಸಾಂಕ್ರಾಮಿಕ ಕಾಲಘಟ್ಟದ  ಒಂದು ನಿರ್ದಿಷ್ಟ ಅವಧಿಯ  ಒಟ್ಟು ಸಾವುಗಳನ್ನು, ಹಿಂದಿನ ಸಾಮಾನ್ಯ ವರ್ಷದ ಅದೇ ನಿರ್ದಿಷ್ಟ ಅವಧಿಯೊಂದಿಗೆ ಹೋಲಿಸುವ ಮೂಲಕ ʼಹೆಚ್ಚುವರಿ ಸಾವುಗಳನ್ನು’ ಲೆಕ್ಕ ಹಾಕಲಾಗುತ್ತದೆ. ಸಾಂಕ್ರಾಮಿಕ ರೋಗದ ಸಾವುಗಳನ್ನು ಲೆಕ್ಕ ಹಾಕಲು ʼಹೆಚ್ಚುವರಿ ಸಾವುಗಳುʼ ಅತ್ಯಂತ ನಿಖರವಾದ ಮಾರ್ಗವಾಗಿದೆ. ಅದಾಗ್ಯೂ, ಎಲ್ಲಾ ಹೆಚ್ಚುವರಿ ಸಾವುಗಳನ್ನು ಸಾಂಕ್ರಾಮಿಕದಿಂದ ಸಂಭವಿಸಿದ ಸಾವುಗಳೆಂದೇ ಪರಿಗಣಿಸಲಾಗದು,  ಸಾಂಕ್ರಾಮಿಕದಿಂದ ಉಂಟಾದ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿನ ವ್ಯತ್ಯಯದಿಂದ ಕೂಡಾ ಈ ಹೆಚ್ಚುವರಿ ಸಾವುಗಳು ಸಂಭವಿಸುತ್ತದೆ. ಕೋವಿಡ್‌ ಸಂದರ್ಭದಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗದೆ ಮೃತಪಟ್ಟಿರುವುದನ್ನು ಕೂಡಾ ಇಲ್ಲಿ ಉಲ್ಲೇಖಿಸಬಹುದು.

ಇದೇ ಲೆಕ್ಕಾಚಾರದಲ್ಲಿ, ಭಾರತದ ಈ ಹಿಂದಿನ ಸಾಮಾನ್ಯ ಅವಧಿಯಲ್ಲಿ ನಡೆದ ಸಾವಿಗೂ ಸಾಂಕ್ರಾಮಿಕ ಸಂದರ್ಭದಲ್ಲಿ ನಡೆದ ಸಾವಿಗೂ ಬಹಳಷ್ಟು ವ್ಯತ್ಯಾಸವಿದೆ. ಸರ್ಕಾರ ನೀಡಿದ ಕೋವಿಡ್‌ ಸಾವಿನ ದತ್ತಾಂಶಗಳೊಂದಿಗೆ ಈ ಸಂಖ್ಯೆ ತಾಳೆಯಾಗುವುದಿಲ್ಲವೆಂದು ಹಲವು ಸಂಶೋಧಕರು ಹೇಳಿದ್ದರು. ಅದಾಗ್ಯೂ, ಸರ್ಕಾರ ಈ ಎಲ್ಲಾ ವರದಿಗಳನ್ನು ಅಲ್ಲಗೆಳೆದಿತ್ತು, ಇದೀಗ ವಿಶ್ವ ಆರೋಗ್ಯ ಸಂಸ್ಥೆಯೇ ಭಾರತ ಸರ್ಕಾರ ನೀಡಿರುವ ಕೋವಿಡ್‌ ಸಾವು ದತ್ತಾಂಶವನ್ನು ನಿರಾಕರಿಸಿದೆ ಎಂದು ವರದಿ ಆಗಿದೆ.

WHO ದ ನೂತನ ವರದಿಯನ್ನು ತಯಾರಿಸಿದ ತಂಡದ ಇಬ್ಬರು ಸದಸ್ಯರನ್ನು TheWireScience ತಂಡವು ಸಂಪರ್ಕಿಸಿದ್ದು, 2020 ರಿಂದ ಭಾರತ ಸರ್ಕಾರವು ಕೋವಿಡ್‌ ಸಾವುಗಳ ಬಗ್ಗೆ ನೀಡಿದ ಅಂಕಿ ಅಂಶಗಳಿಗೂ ಅವರ ಸಂಶೋಧನೆಯ ಅಂಕಿ ಅಂಶಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಅವರು ಒಪ್ಪಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X