ಮಂಗಳೂರು: ಕೆಫೆಯಲ್ಲಿ ವಿದ್ಯಾರ್ಥಿನಿಯರ ನಡುವೆ ಹೊಡೆದಾಟ; ದೂರು ದಾಖಲು

ಮಂಗಳೂರು : ನಗರದ ಬಾವುಟಗುಡ್ಡ ಸಮೀಪದ ಕೆಫೆಯೊಂದರಲ್ಲಿ ಕಾಲೇಜು ವಿದ್ಯಾರ್ಥಿನಿಯರು ಹೊಡೆದಾಟ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ವೈರಲ್ ಆಗಿದೆ.
ಖಾಸಗಿ ಕಾಲೇಜೊಂದರ ಸಮವಸ್ತ್ರ ಧರಿಸಿರುವ ವಿದ್ಯಾರ್ಥಿನಿಯರು ಕೆಫೆಯಲ್ಲಿ ಹೊಡೆದಾಡಿಕೊಂಡಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಕೆಫೆಯಲ್ಲಿ ಯುವಕರೊಂದಿಗೆ ಕುಳಿತಿದ್ದ ಯುವತಿಗೆ ಮತ್ತೊಬ್ಬ ಯುವತಿ ಹಲ್ಲೆ ನಡೆಸಿ ಮಾತಿನ ಚಕಮಕಿ ನಡೆಸಿರುವ ದೃಶ್ಯ ವೀಡಿಯೊದಲ್ಲಿ ಕಾಣುತ್ತದೆ.
ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





