ಬ್ರಹ್ಮಾವರ: ಬೆಲೆ ಏರಿಕೆ ವಿರುದ್ಧ ಸಿಪಿಎಂ ಪ್ರತಿಭಟನೆ

ಬ್ರಹ್ಮಾವರ : ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಬ್ರಹ್ಮಾವರದ ಆಕಾಶವಾಣಿ ಬಳಿ ಸಿಪಿಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಸಭೆಯನ್ನುದ್ದೇಶಿಸಿ ಸಿಪಿಎಂ ನಾಯಕರುಗಳಾದ ಎಚ್.ನರಸಿಂಹ, ಕೆ.ಶಂಕರ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು.
ಪಕ್ಷದ ಮುಖಂಡರಾದ ಶಶಿಧರ ಸ್ವಾಗತಿಸಿದರು. ಪ್ರತಿಭಟನೆಯಲ್ಲಿ ಸುರೇಶ್ ಕಲ್ಲಾಗರ, ವೆಂಕಟೇಶ್ ಕೋಣಿ, ಮಹಾಬಲ ವಡೇರಹೋಬಳಿ, ಬಲ್ಕೀಸ್, ಸದಾಶಿವ ಪೂಜಾರಿ, ಸುಭಾಶ್ ನಾಯ್ಕ್, ಗೊಡ್ವೀನ್ ಪಾಲ್ಗೊಂಡಿದ್ದರು.
Next Story