ದತ್ತಿ ಪ್ರಶಸ್ತಿಗಳಿಗೆ ಲೇಖಕಿ ಶಾಂತಿ ನಾಯಕ, ಮಾಲತಿ ಮುದಕವಿ ಆಯ್ಕೆ
ಬೆಂಗಳೂರು, ಎ.5: ಕರ್ನಾಟಕ ಲೇಖಕಿಯರ ಸಂಘ ವತಿಯಿಂದ ನೀಡುವ 2020ರ ಡಾ.ಜಯಣ್ಣ ಕರಿಯಣ್ಣ ದತ್ತಿನಿಧಿ ಬಹುಮಾನಕ್ಕೆ ಉತ್ತರ ಕನ್ನಡ ಜಿಲ್ಲೆಯ ಜಾನಪದ ತಜ್ಞೆ, ಲೇಖಕಿ ಶಾಂತಿ ನಾಯಕ ಅವರು ಆಯ್ಕೆಯಾಗಿದ್ದು, ಅವರ ‘ಕೆಸು ಪುರಾಣ ಮತ್ತು ವಾಸ್ತವ’ ಕೃತಿಗೆ ದತ್ತಿನಿಧಿ ಬಹುಮಾನ ನೀಡಲಾಗುತ್ತಿದೆ.
ಹಾಗೆಯೇ 2020ನೇ ಸಾಲಿನ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನಕ್ಕೆ ಧಾರವಾಡದ ಲೇಖಕಿ ಮಾಲತಿ ಮುದಕವಿ ಅವರ ‘ಹಾಸ್ಯ ರಂಗೋಲಿ’ ಕೃತಿ ಆಯ್ಕೆಯಾಗಿದೆ. ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
Next Story





