ಐಎಂಎ ಹಗರಣ: ಸಕ್ಷಮ ಪ್ರಾಧಿಕಾರದಿಂದ 69 ಸಾವಿರ ಅರ್ಜಿ ಸ್ವೀಕಾರ

ಬೆಂಗಳೂರು, ಎ.5: ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ನಡೆದ ಹಿನ್ನೆಲೆಯಲ್ಲಿ ಹೂಡಿಕೆ ವಾಪಸ್ ಕೋರಿ ಸಲ್ಲಿಸಿರುವ ಸುಮಾರು 69 ಸಾವಿರ ಅರ್ಜಿಗಳನ್ನು ಸಕ್ಷಮ ಪ್ರಾಧಿಕಾರವು ಸ್ವೀಕರಿಸಿದೆ ಎಂದು ವಿಶೇಷಾಧಿಕಾರಿ ಹಾಗೂ ಸಕ್ಷು ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.
ಐಎಂಎ ಸಂಸ್ಥೆಯ ಠೇವಣಿದಾರರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಒಟ್ಟು 2,600 ಕೋಟಿ ರೂ. ಹಣ ವಾಪಸ್ ಕೋರಿ ಅರ್ಜಿಗಳು ಬಂದಿವೆ ಎಂದು ಪ್ರಾಧಿಕಾರವು ತಿಳಿಸಿದೆ.
ಐಎಂಎ ನಿಧಿಗಳ ವಿತರಣೆಯ ಮೇಲ್ವಿಚಾರಣೆಯ ಸಕ್ಷಮ ಪ್ರಾಧಿಕಾರವು ಎಲ್ಲ ಅರ್ಹ ಹಕ್ಕುದಾರರಿಗೆ(ಠೇವಣಿದಾರರಿಗೆ) ಗರಿಷ್ಠ 2 ಲಕ್ಷ, ಕನಿಷ್ಠ 50 ಸಾವಿರವರೆಗೆ ಆದ್ಯತೆ ಮೇರೆಗೆ ಹಣ ವರ್ಗಾಯಿಸಲಾಗುವುದು ಎಂದು ಪ್ರಾಧಿಕಾರವು ತಿಳಿಸಿದೆ.
ಆದಾಗ್ಯೂ ಎಲ್ಲ ಅರ್ಹ ಕ್ಲೈಮುದಾರರಿಗೆ ಏಕ ಕಾಲದಲ್ಲಿ ಹಣವನ್ನು ಪಾವತಿ ಮಾಡಲಾಗುವುದಿಲ್ಲ. ಸಕ್ಷಮ ಪ್ರಾಧಿಕಾರಿಯವರಲ್ಲಿ ಲಭ್ಯವಿರುವ ಮೊತ್ತಕ್ಕನುಗುಣವಾಗಿ ಠೇವಣಿದಾರರಿಗೆ ಪಾವತಿ ಮಾಡಲಾಗುವುದು ಮತ್ತು ಸಕ್ಷಮ ಪ್ರಾಧಿಕಾರಿಯವರಲ್ಲಿ ಹೆಚ್ಚಿನ ಹಣ ಲಭ್ಯವಾದಂತೆ ಉಳಿಕೆ ಠೇವಣಿದಾರರಿಗೆ ಹಣ ಪಾವತಿಸಲಾಗುತ್ತದೆ.





