ಅರಸೀಕೆರೆ: ಜೀತದಾಳುಗಳಾಗಿದ್ದ 55ಕ್ಕೂ ಹೆಚ್ಚು ಕೂಲಿಕಾರ್ಮಿಕರ ಬಿಡುಗಡೆ; ದೂರು ದಾಖಲು

ಅರಸೀಕೆರೆ, ಎ.5: ಅಕ್ರಮವಾಗಿ ಬಂಧನದಲ್ಲಿದ್ದು, ಜೀತದಾಳುಗಳಾಗಿ ಜಮೀನಿನಲ್ಲಿ ದುಡಿಸಿಯುತ್ತಿದ್ದ 55 ಮಂದಿಗೂ ಹೆಚ್ಚು ಕೂಲಿಕಾರ್ಮಿಕರನ್ನು ಬಿಡುಗಡೆಗೊಳಿಸಿ ಸಂಬಂಧಪಟ್ಟ ಆರೋಪಿಗಳ ವಿರುದ್ಧ ಅರಸೀಕೆರೆ ಪೋಲಿಸರು ಕೇಸು ದಾಖಲಿಸಿದ್ದಾರೆ.
ಅರಸೀಕೆರೆ ತಾಲೂಕಿನ ಕಸಬಾ ಹೋಬಳಿಯ ಅಣ್ಣೇನಹಳ್ಳಿ ಗ್ರಾಮದ ಕಾಂತರಾಜು ಎಂಬುವವರ ತೋಟದಲ್ಲಿ ಜೀತದಾಳುಗಳ ಮಾಹಿತಿ ಪಡೆದ ಅರಸೀಕೆರೆ ಡಿವೈಎಸ್ಪಿಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಕಸಬಾ ಹೋಬಳಿ ಅಣ್ಣೆನಹಳ್ಳಿ ಗ್ರಾಮದ ಹತ್ತಿರ ತೋಟದ ಪಕ್ಕದ ಜಮೀನಿನಲ್ಲಿ, ಶುಂಠಿ ಬೆಳೆಗಾರ ಅರಸೀಕೆರೆ ನಗರದ ವಾಸಿ ಮುನೇಶ ಎಂಬುವನು, ದಾವಣಗೆರೆ, ಹರಿಹರ, ಗುಲ್ಬರ್ಗ, ಶಿವಮೊಗ್ಗ, ತಿಪಟೂರು ಶಿರಾ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಸೋಲಾಪುರ ಮೂಲದ ಒಟ್ಟು 55ಕ್ಕೂ ಹೆಚ್ಚು ಜನರನ್ನು ಕೂಲಿ ಕೆಲಸಕ್ಕೆ ಕರೆತರಲಾಗಿತ್ತು ಎನ್ನಲಾಗಿದೆ.
ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಶುಂಠಿ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಿ, ಕೂಲಿ ಕಾರ್ಮಿಕರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದು, ಅವರಿಗೆ ಸಂಬಳ ನೀಡದೆ ಅವರ ಕುಟುಂಬವರ್ಗದವರನ್ನು ನೋಡಿಕೊಳ್ಳಲು ಕಳುಹಿಸದೆ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.







