ದಿನೇಶ್-ಶಹಬಾಝ್ ಆಕರ್ಷಕ ಜೊತೆಯಾಟ: ರಾಜಸ್ತಾನ್ ರಾಯಲ್ಸ್ಅನ್ನು ಮಣಿಸಿದ ಆರ್ಸಿಬಿ
Photo: Twitter/venkateshprasad
ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್-2022 ಸರಣಿಯ 13ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು 4 ವಿಕೆಟ್ ಅಂತರದದಲ್ಲಿ ಮಣಿಸಿದೆ.
ದಿನೇಶ್ ಕಾರ್ತಿಕ್ ಶಹಬಾಜ್ ಅಹಮದ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ಪಂದ್ಯವನ್ನು ಗೆದ್ದುಕೊಂಡಿದೆ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 169 ರನ್ಗಳಿಸಿತು. ರಾಜಸ್ಥಾನ ರಾಯಲ್ಸ್ ನೀಡಿದ್ದ 170 ರನ್ ಗುರಿಯನ್ನು ಬೆನ್ನತ್ತಿದ ಆರ್ಸಿಬಿ 19.1 ಓವರ್ಗಳಲ್ಲಿ 173 ರನ್ ಗಳಿಸಿ ವಿಜಯದ ನಗೆ ಬೀರಿದೆ.
87 ರನ್ ಕಲೆಹಾಕುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಬಸವಳಿದಿದ್ದ ಆರ್ಸಿಬಿಗೆ ದಿನೇಶ್ ಕಾರ್ತಿಕ್ ಮತ್ತು ಶಹಬಾಝ್ ಆಹ್ಮದ್ ಅವರ ಜೊತೆಯಾಟವು ಹೊಸ ಹುರುಪು ನೀಡಿತು. ಈ ಜೋಡಿಯು ಕೇವಲ 22 ಎಸೆತಗಳಲ್ಲಿ ಬಾರಿಸಿದ ಅರ್ಧ ಶತಕವು ಪಂದ್ಯದ ದಿಕ್ಕನ್ನೇ ಬದಲಿಸಿತು. ಆರ್ಸಿಬಿ ಗೆಲುವಿನ ರೂವಾರಿಗಳಾಗಿ ಹೊರಹೊಮ್ಮಿದ ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹ್ಮದ್ ಕ್ರಮವಾಗಿ 44 ಮತ್ತು 45 ರನ್ ಬಾರಿಸಿದರು.
WE NEVER GIVE UP!
— Royal Challengers Bangalore (@RCBTweets) April 5, 2022
points in the bag.#PlayBold #WeAreChallengers #IPL2022 #Mission2022 #RCB #ನಮ್ಮRCB #RRvRCB pic.twitter.com/koJmR7r0cH