Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜಾತಿ ತಾರತಮ್ಯ, ದೌರ್ಜನ್ಯವನ್ನು ಸಾಮೂಹಿಕ...

ಜಾತಿ ತಾರತಮ್ಯ, ದೌರ್ಜನ್ಯವನ್ನು ಸಾಮೂಹಿಕ ನೋವಿನಂತೆ ಪರಿಗಣಿಸಬೇಕಾಗಿದೆ

ಪ್ರಶಾಂತ್ ಭಾವರೆಪ್ರಶಾಂತ್ ಭಾವರೆ6 April 2022 11:14 AM IST
share
ಜಾತಿ ತಾರತಮ್ಯ, ದೌರ್ಜನ್ಯವನ್ನು ಸಾಮೂಹಿಕ ನೋವಿನಂತೆ ಪರಿಗಣಿಸಬೇಕಾಗಿದೆ

2006ರಲ್ಲಿ ಖೈರ್ಲಾಂಜಿ ಹತ್ಯಾಕಾಂಡ ನಡೆದಾಗ ನಾನು ಬೋರ್ಡಿಂಗ್ ಶಾಲೆಯೊಂದರಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದೆ. ಆ ಘಟನೆಯ ಕುರಿತ ಸುದ್ದಿಯನ್ನು ಕೇಳಿದಾಗ, ನನ್ನಂತೆಯೇ ದಲಿತ ಸಮುದಾಯಕ್ಕೆ ಸೇರಿದ ಓರ್ವ ಸ್ನೇಹಿತನನ್ನು ಕೇಳಿದೆ- ಅಲ್ಲಿ ನಿಜವಾಗಿ ಏನು ನಡೆಯಿತು?

ಪೂರ್ವ ಮಹಾರಾಷ್ಟ್ರದ ನಾಗಪುರ ಸಮೀಪದಲ್ಲಿರುವ ಖೈರ್ಲಾಂಜಿ ಎಂಬ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರ ಮೇಲೆ ಅಮಾನುಷ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದರು. ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತು ಮತ್ತು ಅವರನ್ನು ಅಮಾನುಷವಾಗಿ ಥಳಿಸಿ ಕೊಲ್ಲಲಾಯಿತು. ಆ ಮಹಿಳೆಯರ ಪೈಕಿ ಒಬ್ಬರ ಇಬ್ಬರು ಪುತ್ರರನ್ನು ಗ್ರಾಮಸ್ಥರ ಎದುರೇ ಕೊಲ್ಲಲಾಯಿತು.

ಈ ದೌರ್ಜನ್ಯದ ಬಗ್ಗೆ ಇಷ್ಟೊಂದು ವಿವರಗಳನ್ನು ನನ್ನ ಸ್ನೇಹಿತ ನೀಡಿದಾಗ ನಾನು ಬೆವತು ಹೋದೆ. ಪ್ರಬಲ ಜಾತಿಗೆ ಸೇರಿದ ಜನರ ಗುಂಪೊಂದು ನನ್ನ ಸಮುದಾಯದ ಕುಟುಂಬವೊಂದರ ಮೇಲೆ ದಾಳಿ ನಡೆಸಿ ಇಷ್ಟೊಂದು ಅಮಾನವೀಯವಾಗಿ ಕೊಂದರು ಎನ್ನುವುದನ್ನು ಅರಗಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಜಾತಿ ದೌರ್ಜನ್ಯದ ಘಟನೆಗಳ ಬಗ್ಗೆ ಕೇಳಿದಾಗಲೆಲ್ಲ ನಾನು ಆತಂಕಗೊಳ್ಳುತ್ತೇನೆ. ಅದನ್ನು ಗ್ರಹಿಸಿಕೊಳ್ಳಲು ಅಥವಾ ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನನಗೆ ಕಷ್ಟವಾಗುತ್ತದೆ.

ಜಾತಿ ಹೇಗೆ ಕೆಲಸ ಮಾಡುತ್ತದೆ?

3,000 ವರ್ಷಕ್ಕಿಂತಲೂ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜಾತಿ ವ್ಯವಸ್ಥೆಯು ಲಂಬವಾದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ. ಇದನ್ನು ಭಾರತೀಯ ಸಂವಿಧಾನದ ಶಿಲ್ಪಿ ಬಿ.ಆರ್. ಅಂಬೇಡ್ಕರ್, 1936ರ ತನ್ನ ಪ್ರಬಂಧ ‘ಜಾತಿ ನಿರ್ಮೂಲನೆ’ಯಲ್ಲಿ ‘‘ಶ್ರೇಣೀಕೃತ ಅಸಮಾನತೆ’’ ಎಂಬುದಾಗಿ ಕರೆದಿದ್ದಾರೆ. ಇದು ಹಿಂದೂಗಳನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಾಗಿ ವಿಂಗಡಿಸುತ್ತದೆ. ಪ್ರತಿ ವರ್ಣದಲ್ಲೂ ಹಲವಾರು ಜಾತಿಗಳಿರುತ್ತವೆ. ಈ ಸಾಮಾಜಿಕ ವರ್ಗೀಕರಣದಲ್ಲಿ, ಬ್ರಾಹ್ಮಣರು ತುದಿಯಲ್ಲಿದ್ದರೆ, ಈ ನಾಲ್ಕು ವರ್ಣ ವ್ಯವಸ್ಥೆಯಿಂದಲೇ ಹೊರಗಿರುವ ಅಸ್ಪಶ್ಯರು ತಳದಲ್ಲಿದ್ದಾರೆ. ಆಚಾರದಲ್ಲಿ ಬ್ರಾಹ್ಮಣರು ‘ಅತ್ಯಂತ ಪರಿಶುದ್ಧ’ ಹಾಗೂ ಅಸ್ಪಶ್ಯರು ‘ಅತ್ಯಂತ ಕಲುಷಿತ’ ಎಂಬುದಾಗಿ ಪರಿಗಣಿಸಲಾಗುತ್ತದೆ.

ಹಿಂದೂ ಧಾರ್ಮಿಕ ಪುಸ್ತಕಗಳ ಅನುಮೋದನೆ ಹೊಂದಿರುವ ಈ ಶ್ರೇಣೀಕೃತ ವರ್ಗೀಕರಣವು, ಅಸ್ಪಶ್ಯತೆ ಎಂಬ ಶತಮಾನಗಳ ಹಳೆಯ ಕಲ್ಪನೆಯನ್ನು ಹೊಂದಿದೆ. ಜಾತಿ ವ್ಯವಸ್ಥೆಯ ತಳದಲ್ಲಿರುವ ಜನರ ಗುಂಪನ್ನು ಅಸ್ಪಶ್ಯರು ಎಂಬುದಾಗಿ ಕರೆಯಲಾಗಿದೆ. ಅವರು ಹುಟ್ಟಿನಿಂದಲೇ ಶಾಶ್ವತವಾಗಿ ಅಶುದ್ಧರು, ಅವರನ್ನು ಮುಟ್ಟುವಂತಿಲ್ಲ ಹಾಗೂ ಸಮಾಜದಿಂದ ಅವರು ಹೊರಗಿರಬೇಕು.

ಜಾತಿ ಆಧಾರಿತ ತಾರತಮ್ಯದ ಬಗ್ಗೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ವಿಶೇಷ ಪ್ರತಿನಿಧಿ ರೀಟಾ ಐಝಾಕ್ ಎಂಡ್ಯಾಯೆ ತನ್ನ 2016ರ ವರದಿಯಲ್ಲಿ ಹೀಗೆ ಬರೆಯುತ್ತಾರೆ:

‘‘ಜಾತಿ ಮತ್ತು ಇಂಥದೇ ವ್ಯವಸ್ಥೆಗಳ ಆಧಾರದಲ್ಲಿ ನಡೆಯುತ್ತಿರುವ ತಾರತಮ್ಯವು ಜಾಗತಿಕ ವಿದ್ಯಮಾನವಾಗಿದೆ. ಅದರಿಂದಾಗಿ ಜಗತ್ತಿನಾದ್ಯಂತ 25 ಕೋಟಿಗೂ ಅಧಿಕ ಮಂದಿ ಬಳಲುತ್ತಿದ್ದಾರೆ. ಈ ಗಂಭೀರ ಮಾನವಹಕ್ಕುಗಳ ಉಲ್ಲಂಘನೆಯು ಸಾರ್ವತ್ರಿಕ ಮಾನವ ಘನತೆ ಮತ್ತು ಸಮಾನತೆಯ ಪ್ರಾಥಮಿಕ ತತ್ವಗಳನ್ನು ಧಿಕ್ಕರಿಸುತ್ತದೆ. ಯಾಕೆಂದರೆ ಈ ವ್ಯವಸ್ಥೆಯು ಹುಟ್ಟಿನಿಂದ ಬಂದ ಜಾತಿಯ ಆಧಾರದಲ್ಲಿ ವ್ಯಕ್ತಿಗಳನ್ನು ‘ಶ್ರೇಷ್ಠರು’ ಮತ್ತು ‘ನಿಕೃಷ್ಟ’ರು ಎಂಬುದಾಗಿ ವಿಂಗಡಿಸುತ್ತದೆ. ಈ ವ್ಯವಸ್ಥೆಯು ಸಮುದಾಯಗಳನ್ನು ಹೊರಗಿಡುತ್ತದೆ ಮತ್ತು ಅವುಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತದೆ. ಇಂಥ ಅಮಾನವೀಯ ಕೃತ್ಯಗಳ ಬಲಿಪಶುಗಳು ಸಮಾಜದ ಅತ್ಯಂತ ದುರ್ಬಲ ವರ್ಗಗಳಿಗೆ ಸೇರಿದ ಜನರು. ಅವರು ಅತ್ಯಂತ ಹೀನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಗೆ ಗುರಿಯಾಗುತ್ತಾರೆ. ತಮ್ಮ ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಅನುಭವಿಸುವಲ್ಲಿ ಅವರು ತೀವ್ರ ನಿರ್ಬಂಧಗಳನ್ನು ಎದುರಿಸುತ್ತಾರೆ’’.

ಭಾರತದಲ್ಲಿ 1950ರಲ್ಲಿ ಸಂವಿಧಾನವು ಜಾರಿಗೆ ಬಂದ ಬಳಿಕ, 17ನೇ ಪರಿಚ್ಛೇದದ ಮೂಲಕ ಅಸ್ಪಶ್ಯತೆ ಆಚರಣೆಯನ್ನು ನಿಷೇಧಿಸಲಾಯಿತು ಹಾಗೂ 1955ರಲ್ಲಿ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆಯಡಿ ಅದನ್ನು ಶಿಕ್ಷಾರ್ಹಗೊಳಿಸಲಾಯಿತು. ಹಿಂದಿನ ಅಸ್ಪಶ್ಯರನ್ನು ಸಂವಿಧಾನವು ‘ಪರಿಶಿಷ್ಟ ಜಾತಿಗಳು’ ಎಂಬುದಾಗಿ ಅಧಿಕೃತವಾಗಿ ಗುರುತಿಸಿತು. ಹಿಂದಿನ ಅಸ್ಪಶ್ಯ ಸಮುದಾಯವು ‘ದಲಿತ’ ಎಂಬ ಪದದ ಮೂಲಕ ತನ್ನನ್ನು ಗುರುತಿಸಿಕೊಳ್ಳಲು ಬಯಸಿತು.

ಶತಮಾನಗಳಿಂದ ದಲಿತರ ತಲೆಮಾರುಗಳನ್ನು ‘ಮೇಲ್ಜಾತಿ’ಯ ಸಮಾಜವು ಶೋಷಿಸಿಕೊಂಡು ಬಂತು. ಸ್ವಾತಂತ್ರ ದೊರೆತು 75 ವರ್ಷಗಳಾದರೂ, ಇಂದು ಕೂಡ ದಲಿತ ಸಮುದಾಯವು ತನ್ನ ದೈನಂದಿನ ಬದುಕಿನಲ್ಲಿ ತಾರತಮ್ಯ, ಅವಮಾನ ಮತ್ತು ಜಾತಿ ದೌರ್ಜನ್ಯಗಳನ್ನು ಎದುರಿಸುತ್ತಿದೆ. ಮುಖ್ಯವಾಹಿನಿಯ ಮಾಧ್ಯಮಗಳು, ನಿರ್ಧಾರ ತೆಗೆದುಕೊಳ್ಳುವ ಸರಕಾರಿ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು ಮುಂತಾದುವುಗಳಲ್ಲಿ ಅವರ ಪ್ರಾತಿನಿಧ್ಯದ ಕೊರತೆಯು, ಸಾಮಾಜಿಕ ಜೀವನದ ಪ್ರತಿಯೊಂದು ವಲಯದಲ್ಲಿ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡಲಾಗುತ್ತಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ.

ಈ ತಾರತಮ್ಯವನ್ನು ವಿರೋಧಿಸಲು, ದಲಿತ ಸಮುದಾಯದ ಸದಸ್ಯರು ಜಾತಿ ಶ್ರೇಷ್ಠತೆಯ ಬ್ರಾಹ್ಮಣ್ಯದ ಕಲ್ಪನೆಗಳನ್ನು ಪ್ರಶ್ನಿಸಿದರು ಹಾಗೂ ಸಮಾನತೆ ಮತ್ತು ಘನತೆಗಾಗಿ ಆಗ್ರಹಿಸಿದರು. ಸಾಂವಿಧಾನಿಕ ರಕ್ಷಣೆಯ ಪ್ರಯೋಜನವನ್ನು ಪಡೆದ ದಲಿತ ಸಮುದಾಯದ ಕೆಲವು ಸದಸ್ಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೇರಿದರು. ಆದರೆ, ಕುದುರೆ ಸವಾರಿ, ಮೀಸೆ ಬೆಳೆಸುವುದು, ಹಿಂದೂ ದೇವಾಲಯ ಪ್ರವೇಶಿಸುವುದು, ತಮ್ಮ ಆರಾಧ್ಯ ನಾಯಕ ಬಿ.ಆರ್. ಅಂಬೇಡ್ಕರ್‌ರನ್ನು ಸ್ತುತಿಸುವ ಹಾಡುಗಳನ್ನು ಫೋನ್‌ಗಳಲ್ಲಿ ರಿಂಗ್‌ಟೋನ್ ಹಾಕುವುದು ಮುಂತಾದ ಚಟುವಟಿಕೆಗಳ ಮೂಲಕ ತಮ್ಮ ಹಕ್ಕು ಸ್ಥಾಪಿಸಲು ದಲಿತರು ಕೊಂಚ ಪ್ರಯತ್ನ ನಡೆಸಿದರೂ ‘ಮೇಲ್ಜಾತಿಯ’ ಸವರ್ಣೀಯ ಹಿಂದೂಗಳು ಕೆರಳುತ್ತಾರೆ. ಅದು ಅವರನ್ನು ಅಭದ್ರಗೊಳಿಸುತ್ತದೆ. ಹಾಗಾಗಿ, ‘‘ಅವರಿಗೆ ಒಂದು ಪಾಠ ಕಲಿಸುವುದಕ್ಕಾಗಿ’’ ದಲಿತರ ವಿರುದ್ಧ ಜಾತಿ ಆಧಾರಿತ ತಾರತಮ್ಯಗಳು ಮತ್ತು ಜಾತಿ ದೌರ್ಜನ್ಯಗಳು ಮುಂದುವರಿದಿವೆ ಎಂದು ತನ್ನ 2010ರ ಪುಸ್ತಕ ‘ದ ಪರ್ಸಿಸ್ಟೆನ್ಸ್ ಅಫ್ ಕಾಸ್ಟ್: ದ ಖೈರ್ಲಾಂಜಿ ಮರ್ಡರ್ಸ್‌ ಆ್ಯಂಡ್ ಇಂಡಿಯಾಸ್ ಹಿಡನ್ ಕಾಸ್ಟ್ ಅಪಾರ್‌ತೈಡ್’ನಲ್ಲಿ ವಿದ್ವಾಂಸ ಮತ್ತು ಲೇಖಕ ಆನಂದ್ ತೇಲ್ತುಂಬ್ಡೆ ಹೇಳುತ್ತಾರೆ. ‘‘ಜಾತಿ ವ್ಯವಸ್ಥೆಯನ್ನು ಉಳಿಸುವ ಹತಾಶ ಪ್ರಯತ್ನವಾಗಿ ಹಾಗೂ ಸಮಾಜದಲ್ಲಿ ದಲಿತರ ಸ್ಥಾನವನ್ನು ತೋರಿಸುವುದಕ್ಕಾಗಿ ಅವರು ಇದನ್ನು ಮಾಡಿಕೊಂಡು ಬರುತ್ತಾರೆ’’ ಎಂದು ಅವರು ಹೇಳುತ್ತಾರೆ.

ಸಮುದಾಯಕ್ಕೆ ಸಾಂತ್ವನ

ಆ ಹಿಂಸಾಚಾರವನ್ನು ಕೇವಲ ವ್ಯಕ್ತಿಗಳ ಮೇಲೆ ನಡೆಸಲಾಗಿರಲಿಲ್ಲ. ಅದು ದಲಿತರ ನಿಕೃಷ್ಟ ಸಾಮಾಜಿಕ ಸ್ಥಾನಮಾನವನ್ನು ಅವರಿಗೆ ನೆನಪಿಸುವುದಕ್ಕಾಗಿ ಇಡೀ ದಲಿತ ಸಮುದಾಯದ ಗುರುತಿನ ಮೇಲೆ ನಡೆದ ದಾಳಿಯಾಗಿತ್ತು. ಹಾಗಾಗಿ, ಪ್ರತಿಯೊಂದು ಜಾತಿ ದೌರ್ಜನ್ಯವು ಸಮುದಾಯದ ಒಟ್ಟಾರೆ ನೋವನ್ನು ಹೆಚ್ಚಿಸುತ್ತದೆ.

‘‘ಸಮುದಾಯದ ಸದಸ್ಯನೊಬ್ಬ ಅನುಭವಿಸುವ ನೋವು ಸಾಮೂಹಿಕ ನೋವಿಗೆ ಸೇರ್ಪಡೆಗೊಳ್ಳುತ್ತದೆ. ಆದರೆ ವ್ಯಕ್ತಿಗಳ ಮೇಲೆ ನಡೆಯುವ ಯಾವುದೇ ದಾಳಿಯು ಸಮುದಾಯವನ್ನೇ ಗುರಿಯಾಗಿರಿಸುತ್ತದೆ. ಸಾಮೂಹಿಕ ನೋವು ಆಗುವ ವೈಯಕ್ತಿಕ ನೋವಿನ ಬಗ್ಗೆ ಇಲ್ಲಿ ನನ್ನ ಕಾಳಜಿ. ಸಾಮಾಜಿಕ ಗುರುತಿನ ಮೇಲೆ ಮಾಡಲಾದ ಗಾಯ ಎಂಬುದಾಗಿ ಪರಿಗಣಿಸಲಾಗುವ ಯಾವುದೇ ದಾಳಿಯು ಸಾಮೂಹಿಕ ನೋವು ಆಗಬಹುದಾಗಿದೆ.

ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆ ಮತ್ತು ಸಮಾಜದ ಮೇಲೆ ಅದು ಬೀರುವ ದುಷ್ಪರಿಣಾಮಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಲು ಭಾರತೀಯ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಜಾತಿ ತಾರತಮ್ಯ ಎನ್ನುವುದು ಇಲ್ಲ ಎಂಬುದಾಗಿ ಆಡಳಿತ ಮತ್ತು ಪ್ರಬಲ ಜಾತಿಗಳ ಗುಂಪುಗಳು ಹೇಳಿಕೊಳ್ಳುತ್ತವೆ. ಜಾತಿ ತಾರತಮ್ಯ ಎನ್ನುವುದು ಇತಿಹಾಸ ಹಾಗೂ ಈಗ ನಾವು ಇತಿಹಾಸವನ್ನು ಮರೆತು ಭವಿಷ್ಯದತ್ತ ನೋಡಬೇಕು ಎಂಬುದಾಗಿ ಅವರು ವಾದಿಸುತ್ತಾರೆ. ‘‘ಅವರು ಅಪರಾಧವನ್ನು ಬದಿಯಲ್ಲಿ ನಿಂತು ನೋಡುವ ಕೆಲಸವನ್ನು ಮಾಡುತ್ತಿದ್ದಾರೆ’’ ಎಂಬುದಾಗಿ ‘ಕಲ್ಚರಲ್ ಟ್ರಾಮ ಆ್ಯಂಡ್ ಕಲೆಕ್ಟಿವ್ ಐಡೆಂಟಿಟಿ’ ಎಂಬ 2004ರ ಪುಸ್ತಕದಲ್ಲಿ ಪ್ರಕಟಗೊಂಡ ‘ಟುವಾರ್ಡ್ಸ್ ಎ ತಿಯರಿ ಆಫ್ ಕಲ್ಚರಲ್ ಟ್ರಾಮ’ ಎಂಬ ಹೆಸರಿನ ಪ್ರಬಂಧದಲ್ಲಿ ಜೆಫ್ರಿ ಸಿ. ಅಲೆಕ್ಸಾಂಡರ್ ಬಣ್ಣಿಸುತ್ತಾರೆ. ಅವರು ಮಾತುಕತೆಗಳಿಗೆ ಅವಕಾಶ ಕಲ್ಪಿಸುವುದಿಲ್ಲ ಹಾಗೂ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಜಾತಿ ಎಂಬ ಸಾಮಾಜಿಕ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದಿಲ್ಲ ಎಂದು ಅವರು ಹೇಳುತ್ತಾರೆ.

ಜಾತಿ ದೌರ್ಜನ್ಯಗಳನ್ನು ನಿವಾರಿಸಲು ಮತ್ತು ತಡೆಯಲು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ಮತ್ತು ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ, 1955 ಮುಂತಾದ ಕಾನೂನುಗಳಿವೆ. ಆದರೆ, ಈ ಕಾನೂನುಗಳ ಸಮರ್ಪಕ ಅನುಷ್ಠಾನದ ಕೊರತೆಯಿಂದಾಗಿ ಅವುಗಳು ವಿಫಲವಾಗಿವೆ. ಹೆಚ್ಚಿನ ಪ್ರಕರಣಗಳಲ್ಲಿ, ಸರಕಾರವು ತಾರತಮ್ಯ ಮತ್ತು ಹಿಂಸೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತದೆ ಹಾಗೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತದೆ. ಇದು ಸಂತ್ರಸ್ತರನ್ನು ಇನ್ನಷ್ಟು ಸಂಕಟಕ್ಕೆ ದೂಡುತ್ತದೆ. ಇದು ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆಯನ್ನು ಸ್ಥಾಪಿಸುವ ಕಾರ್ಯಕ್ಕೆ ಸರಕಾರ ಹೊಂದಿರುವ ಬದ್ಧತೆಯ ಕೊರತೆಯನ್ನು ತೋರಿಸುತ್ತದೆ.

ಸಾಮಾಜಿಕ ಜಾಗೃತಿಯ ಅಗತ್ಯದ ಬಗ್ಗೆ 1943ರಲ್ಲಿ ‘ರಾನಡೆ, ಗಾಂಧಿ ಮತ್ತು ಜಿನ್ನಾ’ ಎಂಬ ವಿಷಯದ ಮೇಲೆ ಮಾಡಿದ ಭಾಷಣದಲ್ಲಿ ಬಿ.ಆರ್. ಅಂಬೇಡ್ಕರ್ ಹೀಗೆ ಹೇಳಿದ್ದರು:

‘‘ಪ್ರತಿಯೊಬ್ಬ ವ್ಯಕ್ತಿಗೆ ಮೂಲಭೂತ ಹಕ್ಕುಗಳ ಉಡುಗೊರೆಯನ್ನು ನೀಡುವ ಕಲ್ಪನೆಯು ನಿಸ್ಸಂದೇಹವಾಗಿಯೂ ಶ್ಲಾಘನಾರ್ಹ. ಪ್ರಶ್ನೆಯಿರುವುದು, ಅವುಗಳನ್ನು ಹೇಗೆ ಪರಿಣಾಮಕಾರಿಯಾಗಿಸುವುದು ಎನ್ನುವುದು. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಅಭಿಪ್ರಾಯವೆಂದರೆ, ಕಾನೂನಿನ ಮೂಲಕ ಹಕ್ಕುಗಳನ್ನು ನೀಡಿದರೆ ಅವುಗಳು ಸುಭದ್ರವಾಗಿರುತ್ತದೆ ಎನ್ನುವುದು. ಆದರೆ, ಇದು ಪರಿಪೂರ್ಣವಲ್ಲ. ಕಾನೂನುಗಳು ಹಕ್ಕುಗಳನ್ನು ರಕ್ಷಿಸುವುದಿಲ್ಲ, ಆದರೆ ಸಮಾಜದಲ್ಲಿರುವ ಸಾಮಾಜಿಕ ಮತ್ತು ನೈತಿಕ ಪ್ರಜ್ಞೆ ರಕ್ಷಿಸುತ್ತದೆ ಎನ್ನುವುದು ಅನುಭವದಿಂದ ಸಾಬೀತಾಗಿದೆ. ಕಾನೂನಿನ ಮೂಲಕ ಬರುವ ಹಕ್ಕುಗಳನ್ನು ಮಾನ್ಯಮಾಡಬೇಕು ಎನ್ನುವುದು ಸಾಮಾಜಿಕ ಪ್ರಜ್ಞೆಯಾದರೆ, ಹಕ್ಕುಗಳು ಸುರಕ್ಷಿತ ಮತ್ತು ಸುಭದ್ರವಾಗಿರುತ್ತದೆ. ಆದರೆ, ಮೂಲಭೂತ ಹಕ್ಕುಗಳನ್ನು ಸಮುದಾಯವು ವಿರೋಧಿಸಿದರೆ, ಸಂಸತ್ತಾಗಲಿ, ನ್ಯಾಯಾಂಗವಾಗಲಿ ಆ ಹಕ್ಕುಗಳನ್ನು ನಿಜವಾದ ಅರ್ಥದಲ್ಲಿ ಖಾತರಿಪಡಿಸಲು ಸಾಧ್ಯವಿಲ್ಲ.’’

ಐತಿಹಾಸಿಕ ಅನ್ಯಾಯಗಳನ್ನು ಸಾಮೂಹಿಕ ನೋವಿನ ಮಸೂರದ ಮೂಲಕ ನಿವಾರಿಸುವ ಕ್ರಮಕ್ಕೆ ಜೆಫ್ರಿ ಸಿ. ಅಲೆಕ್ಸಾಂಡರ್, ರಾನ್ ಎಯರ್‌ಮನ್, ಕಾಯ್ ಟಿ. ಎರಿಕ್ಸನ್ ಮತ್ತು ಗೇಲ್ ಕ್ರಿಸ್ಟೋಫರ್ ಮುಂತಾದ ಹಲವು ಸಮಾಜ ಶಾಸ್ತ್ರಜ್ಞರು ಒತ್ತು ನೀಡುತ್ತಾ ಬಂದಿದ್ದಾರೆ. ಸಾಮೂಹಿಕ ಸಾಂತ್ವನ ಮತ್ತು ಜನಾಂಗೀಯ ಸಾಂತ್ವನಗಳು ಪ್ರಗತಿ ಸಾಧಿಸಲು ಮತ್ತು ಸಾಮಾಜಿಕ ಅಸಮಾನತೆಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಮಾಜಕ್ಕೆ ಹೇಗೆ ಸಹಾಯ ಮಾಡಬಹುದು ಎನ್ನುವುದನ್ನೂ ಅವರು ವಿವರಿಸಿದ್ದಾರೆ.

ಉದಾಹರಣೆಗೆ; 1994ರಲ್ಲಿ ವರ್ಣಭೇದ ನೀತಿ ವ್ಯವಸ್ಥೆ ಕೊನೆಗೊಂಡ ಬಳಿಕ, ದಕ್ಷಿಣ ಆಫ್ರಿಕ ಸರಕಾರವು 1996ರಲ್ಲಿ ಸತ್ಯ ಮತ್ತು ಸಾಮರಸ್ಯ ಆಯೋಗವನ್ನು ರಚಿಸಿತು. 1960 ಮತ್ತು 1994ರ ನಡುವಿನ ಅವಧಿಯಲ್ಲಿ ನಡೆದ ಸಾರಾಸಗಟು ಮಾನವಹಕ್ಕು ಉಲ್ಲಂಘನೆಗಳ ಕಾರಣಗಳು ಮತ್ತು ವ್ಯಾಪ್ತಿಯ ಬಗ್ಗೆ ಸತ್ಯವನ್ನು ಕಂಡುಹಿಡಿಯುವ ಮೂಲಕ ದೇಶದ ಗಾಯ ವಾಸಿಯಾಗಲು ಮತ್ತು ತನ್ನ ಜನರ ನಡುವೆ ಸಾಮರಸ್ಯ ತರಲು ನೆರವಾಗುವುದು ಅದರ ಉದ್ದೇಶವಾಗಿತ್ತು. ಸಾಂಸ್ಥಿಕ ಮತ್ತು ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ತಾರತಮ್ಯವನ್ನು ನಿವಾರಿಸಲು, ಸಾಮೂಹಿಕ ಸಾಂತ್ವನಕ್ಕೆ ಅವಕಾಶ ನೀಡಲು ಮತ್ತು ಸಮಾಜವನ್ನು ಒಗ್ಗೂಡಿಸಲು ಹಂಗಾಮಿ ನ್ಯಾಯ ವ್ಯವಸ್ಥೆಯಾಗಿ ಈ ವಿಧಾನವನ್ನು 40ಕ್ಕೂ ಹೆಚ್ಚು ದೇಶಗಳು ಬಳಸಿಕೊಂಡವು.

ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವವನ್ನು ಸ್ಥಾಪಿಸಲು ಮತ್ತು ತುಳಿತಕ್ಕೊಳಗಾದ ದಲಿತ ಸಮುದಾಯದ ಸಾಮೂಹಿಕ ನೋವನ್ನು ಉಪಶಮನಗೊಳಿಸಲು ನಾವು ಒಂದು ಸಮಾಜವಾಗಿ ಮತ್ತು ಪ್ರಗತಿಪರ ದೇಶವಾಗಿ ಒಂದು ಹೆಜ್ಜೆಯನ್ನು ಮುಂದಿಡುವುದು ಹಾಗೂ ಇದಕ್ಕಾಗಿ ನಮ್ಮನ್ನು ಬದ್ಧಗೊಳಿಸುವುದು ಇಂದಿನ ಅಗತ್ಯವಾಗಿದೆ.

ತುಳಿತಕ್ಕೊಳಗಾದ ಸಮುದಾಯದ ಮೇಲೆ ನಿರಂತರವಾಗಿ ನಡೆದ ಐತಿಹಾಸಿಕ ಅನ್ಯಾಯಗಳನ್ನು ಒಪ್ಪಿಕೊಳ್ಳಲು ರಾಜಕೀಯ ಇಚ್ಛಾಶಕ್ತಿ ರೂಪುಗೊಳ್ಳಬೇಕು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾಮೂಹಿಕ ಸಾಂತ್ವನಕ್ಕೆ ಅವಕಾಶಗಳನ್ನು ಸೃಷ್ಟಿಸಬೇಕು. ಈ ಎಲ್ಲ ಕ್ರಮಗಳು ಸಮುದಾಯದ ಕ್ಷೇಮ ಮತ್ತು ಸಾಮಾಜಿಕ ಬಾಂಧವ್ಯವನ್ನು ಖಾತರಿಪಡಿಸಬಹುದು.

ಕೃಪೆ: thewire.in

share
ಪ್ರಶಾಂತ್ ಭಾವರೆ
ಪ್ರಶಾಂತ್ ಭಾವರೆ
Next Story
X