ಕಾರ್ಕಳ : ವಿಶ್ವ ಧ್ವನಿ ದಿನದ ಅಂಗವಾಗಿ ಉಚಿತ ಗಂಟಲು, ಧ್ವನಿ ತಪಾಸಣಾ ಶಿಬಿರ
ಕಾರ್ಕಳ : ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ವಾಕ್ ಮತ್ತು ಶ್ರವಣ ವಿಭಾಗ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ತಜ್ಞವೈದರಿಂದ ವಿಶ್ವ ಧ್ವನಿ ದಿನದ ಅಂಗವಾಗಿ ಉಚಿತ ಗಂಟಲು ತಪಾಸಣಾ ಮತ್ತು ಧ್ವನಿ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಧ್ವನಿಗೆ ಹೆಚ್ಚು ಒತ್ತು ಕೊಟ್ಟು ಧ್ವನಿಯ ಸಮಸ್ಯೆಯಿಂದ ಬಳಲುತ್ತಿರುವವರು, ಯಕ್ಷಗಾನ ಮತ್ತು ನಾಟಕ ಕಲಾವಿದರು, ವಿವಿಧ ಕ್ಷೇತ್ರದ ಸಂಗೀತಗಾರರು, ವಾದ್ಯಗಾರರು, ಶಿಕ್ಷಕರು, ವಕೀಲರು ಬಸ್ ಕಂಡೆಕ್ಟರ್ ಗಳು, ಕಾಲ್ ಸೆಂಟರ್ ಉದ್ಯೋಗಿಗಳು, ಅಂಗನವಾಡಿ ಕಾರ್ಯಕತೆಯರು, ಉಸಿರಾಟದ ತೊಂದರೆಯಿಂದ ಬಳಳುತ್ತಿರುವವರು ಇತರೆ ಧ್ವನಿ ಸಂಬಂಧಿಸಿದ ಸಮಸ್ಯೆ ಇರುವವರು ಇದರ ಸದುಪಯೋಗ ಪಡೆದು ಕೊಳ್ಳಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಈ ಶಿಬಿರಕ್ಕೆ ಅನುಭವಿ ಕಿವಿ ಮೂಗು ಗಂಟಲು ತಜ್ಞ ವೈದರಾದ ಡಾ. ಅನುಷಾ ಶೆಟ್ಟಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವಾಕ್ ಮತ್ತು ಶ್ರವಣ ವಿಭಾಗ ಡಾ. ರಾಕೇಶ್ ಸಿ.ವಿ ಇವರ ನೇತ್ರತ್ವದಲ್ಲಿ ದಿನಾಂಕ 11ನೇ ಎಪ್ರಿಲ್ 2022 ರಿಂದ 13ನೇ ಎಪ್ರಿಲ್ 2022ರ ವರೆಗೆ ಬೆಳ್ಳಿಗೆ ಗಂಟೆ 10 ರಿಂದ ಮದ್ಯಾಹ್ನ 4 ಗಂಟೆಯ ವರೆಗೆ ಡಾ. ಟಿ.ಎಂ.ಏ ಪೈ ರೋಟರಿ ಆಸ್ಪತ್ರೆಯಲ್ಲಿ ಆಯೋಜೆಸಲಾಗಿದೆ. ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕಾಗಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಕೀರ್ತಿನಾಥ ಬಲ್ಲಾಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







