ಮಲ್ಪೆ ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಮೃತ್ಯು
ಮಲ್ಪೆ : ಸಮುದ್ರದಲ್ಲಿ ಈಜುತ್ತಿದ್ದ ಯುವಕನೋರ್ವ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಎ.5ರಂದು ಮಲ್ಪೆ ಬೀಚ್‌ನಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರು ಜಾಲಹಳ್ಳಿ ಸ್ನೇಹಸಿಶ್ ಮಜುಂದರ್ ಎಂಬವರ ಮಗ ಸಾಮ್ರಾಟ್ ಮಜುಂದಾರ್(28) ಎಂದು ಗುರುತಿಸಲಾಗಿದೆ. ಇವರು ಎ.೪ರಂದು ರಾತ್ರಿ ಸ್ನೇಹಿತರ ಜೊತೆ ಮದುವೆ ಕಾರ್ಯಕ್ರಮಕ್ಕಾಗಿ ಉಡುಪಿಗೆ ಬಂದಿದ್ದು, ಎ.5ರಂದು ಬೆಳಗ್ಗೆ ಇವರೆಲ್ಲ ಮಲ್ಪೆ ಬೀಚ್ ಸಮೀಪದ ಸಮುದ್ರದಲ್ಲಿ ಈಜಲು ಹೋಗಿದ್ದರು.
ಈ ವೇಳೆ ಸಾಮ್ರಾಟ್ ಹಾಗೂ ಮಹರಾಷ್ಟ್ರದ ಬಿನು ಮೋಹನ್ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದರು. ಕೂಡಲೇ ಮಲ್ಪೆಯ ಲೈಫ್‌ಗಾರ್ಡ್‌ಗಳು ಬಿನು ಮೋಹನ್‌ರನ್ನು ರಕ್ಷಿಸಿದರು. ಆದರೆ ಸಾಮ್ರಾಟ್ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರದ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡು ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





