ಜಮ್ಮುಕಾಶ್ಮೀರದಲ್ಲಿ ಎನ್ಕೌಂಟರ್: ಇಬ್ಬರು ಶಂಕಿತ ಉಗ್ರರು ಸಾವು

ಶ್ರೀನಗರ, ಎ. 5: ಪುಲ್ವಾಮ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಬುಧವಾರ ನಡೆಸಿದ ಎನ್ಕೌಂಟರ್ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಅನ್ಸಾರ್ ಘಝ್ವಾತ್-ಉಲ್ ಹಿಂದ್ ಹಾಗೂ ಲಷ್ಕರೆ ತಯ್ಯಿಬಕ್ಕೆ ಸೇರಿದ ಇಬ್ಬರು ಶಂಕಿತ ಉಗ್ರರು ಹತರಾಗಿದ್ದಾರೆ.
ಸಾವನ್ನಪ್ಪಿದ ಇಬ್ಬರು ಶಂಕಿತ ಉಗ್ರರನ್ನು ಅನ್ಸಾರ್ ಘಝ್ವಾತ್-ಉಲ್ ಹಿಂದ್ನ ಸಫತ್ ಮುಝಪ್ಫರ್ ಸೋಫಿ ಆಲಿಯಾಸ್ ಮುವಾವಿಯಾ ಹಾಗೂ ಲಷ್ಕರೆ ತಯ್ಯಿಬದ ಉಮರ್ ಟೇಲಿ ಆಲಿಯಾಸ್ ತಲ್ಹಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಶ್ರೀನಗರದ ಖಾನ್ಮೋಹ್ ಪ್ರದೇಶದಲ್ಲಿ ಸರಪಂಚರೋರ್ವರ ಹತ್ಯೆ ಸೇರಿದಂತೆ ಹಲವು ಭಯೋತ್ಪಾದಕ ಘಟನೆಗಳಲ್ಲಿ ಈ ಇಬ್ಬರು ಬೇಕಾದವರಾಗಿದ್ದಾರೆ. ಈ ಇಬ್ಬರೂ ತಮ್ಮ ನೆಲೆಯನ್ನು ಇತ್ತೀಚೆಗೆ ಟ್ರಾಲ್ಗೆ ವರ್ಗಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story





